Tiger Shroff Firing |50 ಸಾವಿರ ಅಡ್ವಾನ್ಸ್ ಪಡೆದು ಶೂಟ್ – ಟೈಗರ್ ಫೈರಿಂಗ್ ಟೈಮ್ ಲೈನ್
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್(Tiger Shroff) ಅವರ ಕಾರಿನ ಮೇಲೆ ಭಾನುವಾರ ರಾತ್ರಿ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರ್ಯಾಪಿಡೋ (Rapido) ಚಾಲಕ, ಓರ್ವ ಕೂಲಿ ಕಾರ್ಮಿಕ ಹಾಗೂ ಅಪ್ರಾಪ್ತ ಬಾಲಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು(Mumbai Police) ಬಂಧಿಸಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿರುವ ಫುಟ್ಬಾಲ್ ಕ್ಲಬ್ನಿಂದ ನಟ ಹೊರಬರುತ್

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್(Tiger Shroff) ಅವರ ಕಾರಿನ ಮೇಲೆ ಭಾನುವಾರ ರಾತ್ರಿ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರ್ಯಾಪಿಡೋ (Rapido) ಚಾಲಕ, ಓರ್ವ ಕೂಲಿ ಕಾರ್ಮಿಕ ಹಾಗೂ ಅಪ್ರಾಪ್ತ ಬಾಲಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು(Mumbai Police) ಬಂಧಿಸಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿರುವ ಫುಟ್ಬಾಲ್ ಕ್ಲಬ್ನಿಂದ ನಟ ಹೊರಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೃತ್ಯ ಎಸಗಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿದ್ದ ಆರೋಪಿಗಳನ್ನು ರಾಜಸ್ಥಾನದ ಕೋಟಾ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲಿಂದ ಅವರು ನೇಪಾಳಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಈ ದಾಳಿ ನಡೆಸಲು ಆರೋಪಿಗಳು ಮುಂಗಡವಾಗಿ ಒಟ್ಟಾರೆಯಾಗಿ 50,000 ರೂ. ಹಣ ಪಡೆದಿದ್ದರು. ಕೃತ್ಯದಲ್ಲಿ ಪ್ರತಿಯೊಬ್ಬರ ಪಾತ್ರವೇನು ಹಾಗೂ ಮೂವರೂ ನೇರವಾಗಿ ಗುಂಡು ಹಾರಿಸುವಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. 36 ವರ್ಷದ ನಟ ಟೈಗರ್ ಶ್ರಾಫ್ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತು, ಕಾರಿನ ಮುಚ್ಚಿದ ಗಾಜಿನ ಮೂಲಕವೇ ಅಭಿಮಾನಿಗಳಿಗೆ ಕೈಬೀಸುತ್ತಿದ್ದರು. ಈ ವೇಳೆ ಏಕಾಏಕಿ ಗುಂಡಿನ ಸದ್ದು ಕೇಳಿಬಂದಿದೆ. ಮುಂಭಾಗದಲ್ಲಿದ್ದ ವ್ಯಕ್ತಿಯೊಬ್ಬ ಎರಡೂ ಕೈಗಳಿಂದ ಬಂದೂಕು ಹಿಡಿದು ಕಾರಿನತ್ತ ಗುಂಡು ಹಾರಿಸಿದ್ದು, ಕ್ಯಾಪ್ ಧರಿಸಿದ್ದ ಮತ್ತೊಬ್ಬ ಪಕ್ಕದಿಂದ ಫೈರಿಂಗ್ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅಷ್ಟರಲ್ಲೇ ಸಮೀಪದಲ್ಲೇ ಬೈಕ್ನಲ್ಲಿ ಕಾಯುತ್ತಿದ್ದ ಮತ್ತೊಬ್ಬನೊಂದಿಗೆ ಸೇರಿ ಮೂವರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: 45 ನಿಮಿಷ ಕಾದು ಕುಳಿತಿದ್ದ ಶೂಟರ್ಸ್ – ಪಿಸ್ತೂಲ್ ಜಾಮ್ ಆಗಿದ್ದರಿಂದ ಬದುಕುಳಿದ್ರಾ ನಟ ಟೈಗರ್ ಶ್ರಾಫ್? ಸಂಜೆ – 05.00 – ಫುಟ್ಬಾಲ್ ಆಡಲು ಮೈದಾನಕ್ಕೆ ಆಗಮಿಸಿದ ಟೈಗರ್ ಶ್ರಾಫ್ ಸಂಜೆ – 7:00 – ಆಟ ಮುಗಿಸಿ ಕಾರಿನಲ್ಲಿ ಕೂತ ಟೈಗರ್, ಅಭಿಮಾನಿಗಳ ಜೊತೆ ಸೆಲ್ಫಿ ಸಂಜೆ – 7:05 – ಕಾರು ಗೇಟ್ ನಿಂದ ಹೊರಗೆ ಬರುತ್ತಿದ್ದಂತೆ ಇಬ್ಬರಿಂದ ಟೈಗರ್ ಕಾರಿನ ಮೇಲೆ ದಾಳಿ – 5-7 ಸುತ್ತು ಗುಂಡು ಹಾರಿಸಿ ಬೈಕ್ ನಲ್ಲಿ ಬಂದ 3ನೇ ವ್ಉಕ್ತಿ ಜೊತೆ ಪರಾರಿ – ಟೈಗರ್ ಚಾಲಕ ಫಿರ್ದೋಸ್ ಗೆ ಗಾಯ – ಟೈಗರ್ ಶ್ರಾಫ್ ಕೈಗೂ ಗಾಯ – ತಕ್ಷಣ ಕಾರಿನ ಚಾಲಕನ ಸೀಟಿಗೆ ಬಂದ ನಟನಿಂದ ಕಾರ್ ಡ್ರೈವಿಂಗ್ – ಸ್ಥಳದಲ್ಲಿದ್ದ ಜನರ ಸಹಾಯದಿಂದ ಕಾರಿನ ಹಿಂಭಾಗದಲ್ಲಿ ಕೂತ ಚಾಲಕ – ಟೈಗರ್ ಅಭಿಮಾನಿಗೂ ಗಾಯ – ಕೂಪರ್ ಆಸ್ಪತ್ರೆಗೆ ರವಾನೆ ರಾತ್ರಿ – 7:30 – ಚಾಲಕನ ಜೊತೆ ನಾನಾವತಿ ಆಸ್ಪತ್ರೆಗೆ ಆಗಮಿಸಿದ ಟೈಗರ್ ಶ್ರಾಫ್ ರಾತ್ರಿ – 10:00 – ದಾಳಿಯ ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಅನಿಲ್ ಪಂಡಿತ್ ರಾತ್ರಿ – 11:30 – ಟೈಗರ್ ಶ್ರಾಫ್ ನಿವಾಸಕ್ಕೆ ಭದ್ರತೆ ಹೆಚ್ಚಳ ಮಾಡಿದ ಪೊಲೀಸರು ರಾತ್ರಿ – 11:40 – ಟೈಗರ್ ಶ್ರಾಫ್ ಅವರನ್ನು ಮನೆಗೆ ಕರೆ ತಂದ ಪೊಲೀಸರು