UG NEET | ಆ.4ರಿಂದ 8ರವರೆಗೆ ದಾಖಲೆ ಪರಿಶೀಲನೆ: ಕೆಇಎ
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದವರು ಹಾಗೂ ಇದುವರೆಗೂ ದಾಖಲೆ ಪರಿಶೀಲನೆ (Document Verification) ಮಾಡಿಕೊಳ್ಳದವರ ದಾಖಲೆ ಪರಿಶೀಲನೆ ಆಗಸ್ಟ್ 4ರಿಂದ 8ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ನಡೆಯಲಿದೆ. ಆಗಸ್ಟ್ 2ರಂದು ಬಿಡುಗಡೆ ಮಾಡುವ ಲಿಂಕ್ ಮೂಲಕ ಸ್ಲಾಟ್ ಬುಕ್ ಮಾ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದವರು ಹಾಗೂ ಇದುವರೆಗೂ ದಾಖಲೆ ಪರಿಶೀಲನೆ (Document Verification) ಮಾಡಿಕೊಳ್ಳದವರ ದಾಖಲೆ ಪರಿಶೀಲನೆ ಆಗಸ್ಟ್ 4ರಿಂದ 8ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ನಡೆಯಲಿದೆ. ಆಗಸ್ಟ್ 2ರಂದು ಬಿಡುಗಡೆ ಮಾಡುವ ಲಿಂಕ್ ಮೂಲಕ ಸ್ಲಾಟ್ ಬುಕ್ ಮಾಡಿಕೊಂಡೇ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್ಶಿಪ್ಗೆ ವಿರೋಧ – ಪಾದಯಾತ್ರೆಗೆ ಜೆಡಿಎಸ್ನಿಂದ ಹೊಸ ದಿನಾಂಕ ನಿಗದಿ ಯಾರೆಲ್ಲ ದಾಖಲೆ ಪರಿಶೀಲನೆಗೆ ಬರಬೇಕು? ಎನ್ಆರ್ಐ ವಾರ್ಡ್, ಎನ್ಆರ್ಐ ಮತ್ತು ಫಾರಿನ್ ನ್ಯಾಷನಲ್ಸ್ (NRI Ward, NRI, Foreign Nationals) – ಈ ವರ್ಗಗಳನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್; ಇಂದು ಒಂದೇ ದಿನ ಭಾರತಕ್ಕೆ 2 ಚಿನ್ನ ಸಿಇಟಿ-2026ಕ್ಕೆ ನೋಂದಣಿ ಮಾಡಿ ಪರಿಶೀಲನಾ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳದಿರುವ ಅಭ್ಯರ್ಥಿಗಳು (ಕನ್ನಡ, ಗ್ರಾಮೀಣ, ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ) ದಾಖಲೆ ಪರಿಶೀಲನೆಗೆ ಬರಬೇಕು. ಇದನ್ನೂ ಓದಿ: PublicTV Explainer: ಮೇಕೆದಾಟುಗೆ ನೆರೆ ರಾಜ್ಯಗಳ ಒಪ್ಪಿಗೆ ಬೇಕಿಲ್ಲ – ಕರ್ನಾಟಕದ ಕನಸು ನನಸಾಗುತ್ತಾ? ಹೊಸದಾಗಿ ನೋಂದಣಿ ಮಾಡಿ ಕನ್ನಡ, ಗ್ರಾಮೀಣ, ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಕೂಡ ಪರಿಶೀಲನೆಗೆ ಬರಬೇಕು. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ – ಪ್ರಚೋದನಾಕಾರಿ ವಿಷಯ ಹಂಚಿದ ಯೂಟ್ಯೂಬರ್, ಇನ್ಫ್ಲುಯೆನ್ಸರ್ಗಳ ವಿರುದ್ಧ ಕ್ರಮಕ್ಕೆ ದೆಹಲಿ ಪೊಲೀಸ್ ಸಜ್ಜು ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು (ಕ್ಯಾಟಗರಿ – 2ರಿಂದ ಕ್ಯಾಟಗರಿ-8ರವರೆಗೆ) ಕ್ಲೇಮ್ ಮಾಡಿರುವ ಎಲ್ಲ ಅಭ್ಯರ್ಥಿಗಳು, ಕೋರಮಂಗಲದ ಅದೇ ಕಾಲೇಜಿನಲ್ಲಿ ಆ.4ರಿಂದ 8ರವರೆಗೆ ನಡೆಯುವ ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ಕ್ಯಾಟಗರಿ – RC-1 ಮತ್ತು ಕ್ಯಾಟಗರಿ- RC- 9 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇಲ್ಲ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಮೋದಿ ಅಭ್ಯರ್ಥಿಗಳು ತಮ್ಮ ಕ್ಲೇಮ್ ಪ್ರಕಾರ ಮೂಲ ದಾಖಲೆಗಳ ಸಮೇತ ಪರಿಶೀಲನೆಗೆ ಹಾಜರಾಗಬೇಕು. ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಭೋಗಾಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ 17,900 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ