UP Polls Seat Sharing: ಎಸ್ಪಿ ಬಳಿ 175–200 ಸೀಟಿಗೆ ಬೇಡಿಕೆ ಇಟ್ಟ ಕಾಂಗ್ರೆಸ್
ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಅಳೆದೂ ತೂಗಿ ಸಮಾಜವಾದಿ ಪಕ್ಷದ ಜೊತೆ ಸೀಟು ಹಂಚಿಕೆ ಮಾತುಕತೆ ಆರಂಭಿಸಿದೆ. ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಇರುವ 175–200 ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್, ಎಸ್ಪಿಗೆ ನೀಡಿದೆ.ಕೆಲ ದಿನಗಳ ಹಿಂದೆಯೇ ಸಮಾಜವಾದಿ ಪಕ್ಷದ ನಾಯಕರಿಗೆ ಪಟ್ಟಿ ನೀಡಲಾಗಿದೆ ಎಂದು ಉ

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಅಳೆದೂ ತೂಗಿ ಸಮಾಜವಾದಿ ಪಕ್ಷದ ಜೊತೆ ಸೀಟು ಹಂಚಿಕೆ ಮಾತುಕತೆ ಆರಂಭಿಸಿದೆ. ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಇರುವ 175–200 ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್, ಎಸ್ಪಿಗೆ ನೀಡಿದೆ.ಕೆಲ ದಿನಗಳ ಹಿಂದೆಯೇ ಸಮಾಜವಾದಿ ಪಕ್ಷದ ನಾಯಕರಿಗೆ ಪಟ್ಟಿ ನೀಡಲಾಗಿದೆ ಎಂದು ಉತ್ತರಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ತಿಳಿಸಿದ್ದಾರೆ. ಸದ್ಯದಲ್ಲೇ, ಉಭಯ ಪಕ್ಷಗಳ ನಾಯಕರು, ಸೀಟು ಹಂಚಿಕೆ ಬಗ್ಗೆ ಖುದ್ದು ಮಾತುಕತೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.‘403 ಕ್ಷೇತ್ರಗಳ ಪೈಕಿ 175–200 ಸೀಟಿಗೆ ಬೇಡಿಕೆ ಇಟ್ಟು ನಾವು ಪಟ್ಟಿ ಸಲ್ಲಿಸಿದ್ದೇವೆ’ ಎಂದ ಪಾಲ್, ಮಾತುಕತೆ ಮೂಲಕ ಸೀಟು ಹಂಚಿಕೆಗೆ ಸಿದ್ಧವಿರುವುದಾಗಿ ಸುಳಿವು ನೀಡಿದ್ದಾರೆ.2024ರ ಚುನಾವಣಾ ಫಲಿತಾಂಶದ ಆಧಾರದಲ್ಲಿ, ಸಮಾಜವಾದಿ ಪಕ್ಷದ ಬಹುತೇಕ ನಾಯಕರು ಕಾಂಗ್ರೆಸ್ ಬೇಡಿಕೆ ಬಗ್ಗೆ ಸಮಾಧಾನ ಹೊಂದಿಲ್ಲ ಎಂದು ವರದಿ ತಿಳಿಸಿದೆ.'ಗೆಲ್ಲುವ ಸಾಮರ್ಥ್ಯವೊಂದೇ ಸೀಟು ಹಂಚಿಕೆಗೆ ಏಕೈಕ ಮಾನದಂಡ ಎಂದು ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಸ್ಪಷ್ಟಪಡಿಸಿದ್ದಾರೆ. ಯಾರಾದರೂ ಎಷ್ಟಾದರೂ ಬೇಡಿಕೆ ಇಡಬಹುದು, ಆದರೆ, ರಾಜಕೀಯದಲ್ಲಿ ಒಂದು ಸ್ವೀಕಾರಾರ್ಹ ಮತ್ತು ಅರ್ಥಪೂರ್ಣ ನಿರ್ಧಾರಕ್ಕೆ ಬರಬೇಕೆಂದರೆ, ಕೇವಲ ಮೇಲ್ನೋಟದ ನಿಲುವನ್ನು ಮೀರಿ ಮುಂದೆ ಸಾಗಬೇಕಾಗುತ್ತದೆ’ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.