ʼWait is Overʼ – ಬಿಗ್ಬಾಸ್ ಪ್ರೋಮೋ ಔಟ್.. ಬ್ಲ್ಯಾಕ್ ಸೂಟ್ನಲ್ಲಿ ಹೊಸ ಸೀಸನ್ಗೆ ರೆಡಿ ಎಂದ ಕಿಚ್ಚ
ಬಿಗ್ಬಾಸ್ ಕನ್ನಡ ಸೀಸನ್ 13 (Bigg Boss) ಆರಂಭಕ್ಕೆ ಕಾತರದಿಂದ ಕಾಯುತ್ತಿದ್ದ(BBK 13) ಅಭಿಮಾನಿಗಳಿಗೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್ (Kiccha Sudeep) ಅವರ ಪ್ರೋಮೋ ಬಿಡುಗಡೆಯಾಗಿದ್ದು, ಹೊಸ ಸೀಸನ್ಗೆ ಅಧಿಕೃತವಾಗಿ ಕೌಂಟ್ಡೌನ್ ಶುರುವಾಗಿದೆ. ಪ್ರೋಮೋ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ (Bigg Boss Promo) ಸೋಷಿಯಲ್ ಮೀಡಿಯಾದಲ್ಲಿ

ಬಿಗ್ಬಾಸ್ ಕನ್ನಡ ಸೀಸನ್ 13 (Bigg Boss) ಆರಂಭಕ್ಕೆ ಕಾತರದಿಂದ ಕಾಯುತ್ತಿದ್ದ(BBK 13) ಅಭಿಮಾನಿಗಳಿಗೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್ (Kiccha Sudeep) ಅವರ ಪ್ರೋಮೋ ಬಿಡುಗಡೆಯಾಗಿದ್ದು, ಹೊಸ ಸೀಸನ್ಗೆ ಅಧಿಕೃತವಾಗಿ ಕೌಂಟ್ಡೌನ್ ಶುರುವಾಗಿದೆ. ಪ್ರೋಮೋ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ (Bigg Boss Promo) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. The Bigg Wait is Over!” ಕ್ಯಾಪ್ಷನ್ನಲ್ಲಿ ಬರೆದಿರುವ ಪ್ರೋಮೋದಲ್ಲಿ ಬ್ಲ್ಯಾಕ್ ಸೂಟ್ನಲ್ಲಿ ಸ್ಟೈಲಿಷ್ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್, ʼಕರ್ನಾಟಕದ ಜನ ಯಾರಿಗೂ ಕಾಯೋದಿಲ್ಲ… ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು… ಮತ್ತೆ ಶುರು ಮಾಡೋಣ್ವಾ?ʼ ಎನ್ನುವ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಅಧಿಕೃತ ಮಾಹಿತಿಯಂತೆ ಬಿಗ್ಬಾಸ್ ಕನ್ನಡ 13 ಸೆಪ್ಟೆಂಬರ್ 5ರಿಂದ ಆರಂಭವಾಗಲಿದೆ. ಹೊಸ ಸ್ಪರ್ಧಿಗಳು, ಹೊಸ ಟಾಸ್ಕ್ಗಳು, ಹೊಸ ತಿರುವುಗಳು ಮತ್ತು ಸಾಕಷ್ಟು ಮನರಂಜನೆಯೊಂದಿಗೆ ಈ ಬಾರಿ ಶೋ ಮತ್ತಷ್ಟು ಗ್ರ್ಯಾಂಡ್ ಆಗಿ ಬರಲಿದೆ.ಇದನ್ನೂ ಓದಿ: ʼಬೆಂಕಿಗೆ ತುಪ್ಪ ಸುರಿಯಬೇಡಿʼ – ಹಳೇ ವಿವಾದಕ್ಕೆ ಹೃತಿಕ್ ವಿರುದ್ಧ ಕಂಗನಾ ಗರಂ ಈ ಬಾರಿಯ ಮತ್ತೊಂದು ವಿಶೇಷ ಅಂದ್ರೆ ಕಾಮನ್ ಮ್ಯಾನ್ ಎಂಟ್ರಿ. ಈಗಾಗಲೇ ಆಡಿಷನ್ ಪ್ರಕ್ರಿಯೆ ಮುಗಿದಿದ್ದು, ಸಾವಿರಾರು ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದಾರೆ. ಅವರಲ್ಲಿ ಯಾರಿಗೆ ಬಿಗ್ಬಾಸ್ ಮನೆಯೊಳಗೆ ಹೋಗುವ ಅವಕಾಶ ಸಿಗಲಿದೆ ಅನ್ನೋದು ಗ್ರ್ಯಾಂಡ್ ಪ್ರೀಮಿಯರ್ ದಿನವೇ ಗೊತ್ತಾಗಲಿದೆ. ಕಳೆದ ಸೀಸನ್ ಬಳಿಕ ಈ ಬಾರಿ ಯಾವ ಯಾವ ಸೆಲೆಬ್ರಿಟಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬ ಕುತೂಹಲವೂ ಜೋರಾಗಿದೆ. ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ #BiggBossKannada13 ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಅಭಿಮಾನಿಗಳು ಈಗ ಸೆಪ್ಟೆಂಬರ್ 5ಕ್ಕೆ ಕಾತರದಿಂದ ಕಾಯುತ್ತಿದ್ದಾರೆ.ಇದನ್ನೂ ಓದಿ: ಸಲ್ಮಾನ್ ಖಾನ್ ಸಂಭಾವನೆಗೆ ಕತ್ತರಿ; ಬಾಲಿವುಡ್ನಲ್ಲಿ ಕಡಿಮೆ ಆಯ್ತಾ ಡಿಮ್ಯಾಂಡ್?