We Want Sanju – ಟೀಂ ಇಂಡಿಯಾ ಆಟಗಾರರ ಮುಂದೆ ತೀವ್ರ ಆಕ್ರೋಶ ಹೊರಹಾಕಿದ ಅಭಿಮಾನಿಗಳು
ನಾಟಿಂಗ್ಹ್ಯಾಮ್: ಇಂಗ್ಲೆಂಡ್ (England) ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಬೆನ್ನಲ್ಲೇ ಟೀಂ ಇಂಡಿಯಾ (Team India) ಅಭಿಮಾನಿಗಳು ಸಂಜು ಸ್ಯಾಮ್ಸನ್ (Sanju Samson) ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಟ್ಟಿರುವುದಕ್ಕೆ ಸ್ಟೇಡಿಯಂ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪಂದ್ಯ ಮುಗಿದ ತಕ್ಷಣ ಕ್ರೀಡಾಂಗಣದ ಹೊರಗೆ ನೂರಾರು ಭಾರತೀಯ ಅಭಿಮಾನಿಗಳು ಒ

ನಾಟಿಂಗ್ಹ್ಯಾಮ್: ಇಂಗ್ಲೆಂಡ್ (England) ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಬೆನ್ನಲ್ಲೇ ಟೀಂ ಇಂಡಿಯಾ (Team India) ಅಭಿಮಾನಿಗಳು ಸಂಜು ಸ್ಯಾಮ್ಸನ್ (Sanju Samson) ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಟ್ಟಿರುವುದಕ್ಕೆ ಸ್ಟೇಡಿಯಂ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪಂದ್ಯ ಮುಗಿದ ತಕ್ಷಣ ಕ್ರೀಡಾಂಗಣದ ಹೊರಗೆ ನೂರಾರು ಭಾರತೀಯ ಅಭಿಮಾನಿಗಳು ಒಟ್ಟಾಗಿ ನಮಗೆ ಸಂಜು ಬೇಕು (We Want Sanju) ಎಂದು ಗಟ್ಟಿಯಾಗಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ‘We want Sanju’ chants outside the stadium when team India leaves. pic.twitter.com/bzqljBakTG — Mufaddal Vohra (@mufaddal_vohra) July 8, 2026 ಪಂದ್ಯ ಮುಗಿದ ಬಳಿಕ ಭಾರತದ ಆಟಗಾರರು ಸ್ಟೇಡಿಯಂ ತೊರೆದು ಬಸ್ಸಿನತ್ತ ಸಾಗುತ್ತಿದ್ದಾಗ ಅಭಿಮಾನಿಗಳು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ನಮಗೆ ಅನ್ಯಾಯ, ವಿಶ್ವಕಪ್ ಫಿಕ್ಸ್ ಆಗಿದೆ: ಅರ್ಜೆಂಟೀನಾ ವಿರುದ್ಧದ ಸೋಲಿನ ಬಳಿಕ ಫಿಫಾ ವಿರುದ್ಧ ಮೋಸ್ತಫಾ ಜಿಕೊ ಆಕ್ರೋಶ ಸಂಜು ಸ್ಯಾಮ್ಸನ್ ಸದ್ಯ ಉತ್ತಮ ಫಾರ್ಮ್ನಲ್ಲಿದ್ದರೂ ಸಹ ಅವರನ್ನು ಸತತವಾಗಿ ತಂಡದಿಂದ ಹೊರಗಿಡಲಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲೂ ಅವರಿಗೆ ಅವಕಾಶ ನೀಡಲಾಗಿರಲಿಲ್ಲ. ತಂಡದ ಮಧ್ಯಮ ಕ್ರಮಾಂಕವು ಹೀನಾಯವಾಗಿ ವೈಫಲ್ಯ ಅನುಭವಿಸುತ್ತಿದ್ದರೂ, ಸಂಜು ಅವರಂತಹ ಪ್ರತಿಭಾವಂತ ಆಟಗಾರನನ್ನು ಬೆಂಚ್ ಕಾಯಿಸುತ್ತಿರುವುದಕ್ಕೆ ಅಭಿಮಾನಿಗಳು ಸಿಟ್ಟು ಪ್ರದರ್ಶಿಸಿದ್ದಾರೆ. ಮೂರನೇ ಟಿ 20 ಪಂದ್ಯದಲ್ಲಿ ಮಂಗಳವಾರ ಮೊದಲು ಬ್ಯಾಟ್ ಬೀಸಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಕಠಿಣ ಸವಾಲು ಬೆನ್ನಟ್ಟಿದ ಭಾರತ 11.4 ಓವರ್ಗಳಲ್ಲಿ 76 ರನ್ಗಳಿಗೆ ಆಲೌಟ್ ಆಗಿತ್ತು. ಭಾರತದ ತಂಡದ ಕಳಪೆ ಪ್ರದರ್ಶನಕ್ಕೆ ನೆಟ್ಟಿಗರು ಗೌತಮ್ ಗಂಭೀರ್, ಶ್ರೇಯಸ್ ಅಯ್ಯರ್, ಬಿಸಿಸಿಐ ಆಯ್ಕೆ ಸಮತಿಯನ್ನು ತರಾಟೆಗೆ ತೆಗದುಕೊಳ್ಳುತ್ತಿದ್ದಾರೆ.