Web Exclusive: ಬೀದರ್ ಕೋಟೆಯೊಳಗೆ ದೇಸಿ ತಂತ್ರಜ್ಞಾನದ ನೀರು ಸರಬರಾಜು ವ್ಯವಸ್ಥೆ
ಬೀದರ್: ನಗರದ ಬಹಮನಿ ಅರಸರು ಕಟ್ಟಿಸಿದ ಕೋಟೆ ಹಲವು ಕಾರಣಗಳಿಂದಾಗಿ ಬಹಳ ಭಿನ್ನವಾದುದು.ಇದರಲ್ಲಿ ಅಲ್ಲಿನ ವ್ಯವಸ್ಥಿತವಾದ ನೀರು ಸರಬರಾಜು ವ್ಯವಸ್ಥೆ ಕೂಡ ಒಂದು. ಆಧುನಿಕ ನೀರು ಸರಬರಾಜು ವ್ಯವಸ್ಥೆಯನ್ನು ಮೀರಿಸುವ ರೀತಿಯಲ್ಲಿ 500 ವರ್ಷಗಳ ಹಿಂದೆಯೇ ಬಹಮನಿ ಅರಸರು ತಮ್ಮದೇ ಆದ ಸರಳ ತಂತ್ರಜ್ಞಾನ ಕಂಡುಕೊಂಡಿದ್ದರು.ಪರ್ಶಿಯಾದ ಎಂಜಿನಿಯರ್ಗಳ ಜೊತೆಗೂಡಿ ಸ್ಥಳೀಯ ಪ್ರತಿಭಾ

ಬೀದರ್: ನಗರದ ಬಹಮನಿ ಅರಸರು ಕಟ್ಟಿಸಿದ ಕೋಟೆ ಹಲವು ಕಾರಣಗಳಿಂದಾಗಿ ಬಹಳ ಭಿನ್ನವಾದುದು.ಇದರಲ್ಲಿ ಅಲ್ಲಿನ ವ್ಯವಸ್ಥಿತವಾದ ನೀರು ಸರಬರಾಜು ವ್ಯವಸ್ಥೆ ಕೂಡ ಒಂದು. ಆಧುನಿಕ ನೀರು ಸರಬರಾಜು ವ್ಯವಸ್ಥೆಯನ್ನು ಮೀರಿಸುವ ರೀತಿಯಲ್ಲಿ 500 ವರ್ಷಗಳ ಹಿಂದೆಯೇ ಬಹಮನಿ ಅರಸರು ತಮ್ಮದೇ ಆದ ಸರಳ ತಂತ್ರಜ್ಞಾನ ಕಂಡುಕೊಂಡಿದ್ದರು.ಪರ್ಶಿಯಾದ ಎಂಜಿನಿಯರ್ಗಳ ಜೊತೆಗೂಡಿ ಸ್ಥಳೀಯ ಪ್ರತಿಭಾವಂತರು ಯೋಜನೆ ರೂಪಿಸಿ, ಅದನ್ನು ಬೆರಗುಗೊಳಿಸುವ ರೀತಿಯಲ್ಲಿ ಅನುಷ್ಠಾನಕ್ಕೆ ತಂದದ್ದು ವಿಶೇಷ. ಭೂಮಿಯ ಏರಿಳಿತ ಆಧರಿಸಿ ವೈಜ್ಞಾನಿಕ ರೀತಿಯಲ್ಲಿ ನೀರು ಹರಿಯುವ ವ್ಯವಸ್ಥೆ ಅದಾಗಿತ್ತು. ಇದರಿಂದಾಗಿ ಕುಳಿತ ಜಾಗಕ್ಕೆ ನೀರು ಪೂರೈಕೆಯಾಗುತ್ತಿತ್ತು.ಬೀದರ್ ಕೋಟೆ ಎರಡು ಸುತ್ತಿನ ಗೋಡೆಗಳನ್ನು ಒಳಗೊಂಡಿದೆ. ಅರಸರು ಮತ್ತವರ ಕುಟುಂಬದವರು ವಾಸಿಸುವ ಏಳು ಕಿ.ಮೀ ಸುತ್ತಳತೆಯಿರುವ ಪ್ರದೇಶದ ಸುತ್ತಲೂ ಒಂದು ಗೋಡೆಯಿದ್ದರೆ, ಸಾಮಾನ್ಯ ಜನರಿರುವ ಪ್ರದೇಶದ ಸುತ್ತ ಮತ್ತೊಂದು ಗೋಡೆ ನಿರ್ಮಿಸಿದ್ದರು. ಅರಸರು ಹಾಗೂ ಅವರ ಪರಿವಾರದವರು ವಾಸಿಸುವ ಪ್ರದೇಶದಲ್ಲಿ ವ್ಯವಸ್ಥಿತ ರೀತಿಯಲ್ಲಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಕೊಂಡಿದ್ದರು.ಬೀದರ್ ಕೋಟೆಯ ಆವರಣವೊಂದರಲ್ಲೇ 32 ಬಾವಿಗಳನ್ನು ನಿರ್ಮಿಸಿದ್ದರು. ಈ ಬಾವಿಗಳ ದಂಡೆ ಮೇಲೆ ಮಟ್ಟಿ ಹೊಡೆಯುವ ದೇಸಿ ತಂತ್ರಜ್ಞಾನ ಬಳಸಿ, ಚರ್ಮದ ಚೀಲವನ್ನು ಗಿರಕಿ ಮೂಲಕ ಎತ್ತುಗಳಿಗೆ ಹಗ್ಗ ಕಟ್ಟಿ ಮೇಲೆತ್ತಿ ಸುರಿಯಲಾಗುತ್ತಿತ್ತು. ಈ ನೀರು ಎಲ್ಲ ಕಡೆಗಳಿಗೆ ಸರಾಗವಾಗಿ ಹರಿದು ಹೋಗುತ್ತಿತ್ತು.PV WEB Exclusive: ಲಾಠಿ ಏಟಿಗೆ ಕುಗ್ಗಲ್ಲ; ಪ್ರಾಣ ಹೋದರೂ ಒಂದಿಂಚು ಭೂಮಿ ಕೊಡಲ್ಲWeb Exclusive: ಬತ್ತಿದ್ದ ಕೆರೆ, ಬಾವಿಗಳಿಗೆ ಜೀವ ತುಂಬುವ ‘ಪ್ಯಾಸ್’ ಫೌಂಡೇಷನ್!ಸೋಲಹ ಕಂಭ ಮಸೀದಿ ಮುಂಭಾಗದಲ್ಲಿರುವ ‘ಲಾಲ್ಬಾಗ್’, ‘ತರ್ಕಿಷ್ ಮಹಲ್’, ‘ಗಗನ್ ಮಹಲ್’, ‘ದಿವಾನ್ ಏ ಖಾಸ್’, ‘ದಿವಾನ್ ಏ ಆಮ್’ ಸೇರಿದಂತೆ ಹಲವು ಕಟ್ಟಡಗಳಿಗೆ ನೀರು ಒದಗಿಸಲಾಗುತ್ತಿತ್ತು. ಅದು ಕೂಡ ಬಹಳ ಸರಳವಾದ ತಂತ್ರಜ್ಞಾನದಿಂದ. ಇದು ಅಂದಿನ ಎಂಜಿನಿಯರ್ಗಳ ಕೌಶಲಕ್ಕೆ ದೊಡ್ಡ ಸಾಕ್ಷಿ.ಎತ್ತರದ ಪ್ರದೇಶದ ಮೇಲೆ ಸುರಿದ ನೀರು ಕೊಳವೆ (ಪೈಪ್) ಮೂಲಕ ಹರಿದು ಹೋಗುತ್ತಿತ್ತು. ಅದಕ್ಕಾಗಿ ಮಣ್ಣಿನಿಂದ ತಯಾರಿಸಿ, ಬಳಿಕ ಅದನ್ನು ಸುಟ್ಟ ಪೈಪ್ಗಳನ್ನು ಬಳಸಲಾಗುತಿತ್ತು. ಥೇಟ್ ಟೆರ್ರ ಕೋಟಾ ಮಾದರಿಯಲ್ಲಿ. ಗೋಡೆಗಳನ್ನು ನಿರ್ಮಿಸುವಾಗಲೇ ಈ ಪೈಪ್ಗಳನ್ನು ಅಳವಡಿಸಲಾಗಿತ್ತು. ಗೋಡೆಗಳ ನಡುವಿನ ಕೊಳವೆಗಳ ಮೂಲಕ ನೀರು ಹರಿದು ಹೋಗುತ್ತಿದ್ದ ಕಾರಣ ಇಡೀ ಕಟ್ಟಡದ ಕೋಣೆಗಳು ಹವಾನಿಯಂತ್ರಿತವಾಗಿರುತಿದ್ದವು. ಒಂದು ಹನಿ ನೀರು ಜಿನುಗದಂತೆ ಕೊಳವೆಗಳನ್ನು ಗೋಡೆಯೊಳಗೆ ಹಾಕಿರುವುದು ಅವರ ಬುದ್ಧಿಮತ್ತೆಗೆ ಮತ್ತೊಂದು ದೊಡ್ಡ ಸಾಕ್ಷಿ. ಈಗಲೂ ಬೀದರ್ ಕೋಟೆಯ ಪರಿಸರದಲ್ಲಿ ಓಡಾಡಿದರೆ ಈ ಕೊಳವೆಗಳನ್ನು (ಪೈಪ್) ನೋಡಬಹುದು.ನೀರಿನ ಸಂಗ್ರಹಕ್ಕಾಗಿ ಟ್ಯಾಂಕ್ ಕೂಡ ನಿರ್ಮಿಸಿದ್ದರು. ಇದರ ಮೂಲಕವೇ ಕುಡಿಯಲು, ನಿತ್ಯ ಬಳಕೆ ಹಾಗೂ ಉದ್ಯಾನಗಳಿಗೆ ಬಳಸಲಾಗುತ್ತಿತ್ತು. ಕಾರಂಜಿ ಮತ್ತು ಕೃತಕ ಜಲಪಾತಗಳಿಗೂ ಇದರ ನೀರನ್ನೇ ಉಪಯೋಗಿಸುತ್ತಿದ್ದರು. ಕೋಟೆಯ ಬೆರಗುಗೊಳಿಸುವ ನೀರು ಸರಬರಾಜು ವ್ಯವಸ್ಥೆ ಬಗ್ಗೆ ಅನೇಕ ಪ್ರಬಂಧಗಳು ಮಂಡನೆಯಾಗಿದ್ದು, ಇದನ್ನು ಸಾಕ್ಷೀಕರಿಸುತ್ತವೆ.Web Exclusive | ಬಾಗಲಕೋಟೆ: ತೀವ್ರ ಮಳೆ ಕೊರತೆ; ಬರದ ದಟ್ಟ ಛಾಯೆWeb Exclusive: ಬೆಟ್ಟದಲ್ಲಿ ಜೀವಂತ ಶಿಲ್ಪದಂತೆ ಕೆತ್ತಿದ ‘ಸ್ಲೀಪಿಂಗ್ ಬುದ್ಧ’