Web Exclusive: ಶಾಸನ, ಪ್ರತಿಮೆ, ಶಿಲ್ಪಕಲಾ ಕೃತಿಗಳಿಗೆ ನೆರಳಿಲ್ಲ!
ಐತಿಹಾಸಿಕ ಪ್ರದೇಶದಲ್ಲಿ ಉತ್ಖನನ ನಡೆದಾಗ ದೊರೆತ ಶಾಸನ, ಶಿಲ್ಪ ಕಲಾಕೃತಿಗಳನ್ನು ಜತನದಿಂದ ಸಂರಕ್ಷಿಸುವ ಪರಿಪಾಠ ಎಲ್ಲೆಡೆ ಇದೆ. ಪುರಾತತ್ವ ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ ಶಾಸನ, ಶಿಲ್ಪಕಲೆ, ಪ್ರತಿಮೆ, ಪುತ್ಥಳಿಗಳನ್ನು ಸಂರಕ್ಷಣೆ ಮಾಡುತ್ತವೆ. ಹಂಪಿ ಸೇರಿದಂತೆ ಹಲವು ಐತಿಹಾಸಿಕ ತಾಣಗಳಲ್ಲಿ ಈ ವಸ್ತುಸಂಗ್ರಹಾಲಯಗಳಿವೆ. ಆ

ಐತಿಹಾಸಿಕ ಪ್ರದೇಶದಲ್ಲಿ ಉತ್ಖನನ ನಡೆದಾಗ ದೊರೆತ ಶಾಸನ, ಶಿಲ್ಪ ಕಲಾಕೃತಿಗಳನ್ನು ಜತನದಿಂದ ಸಂರಕ್ಷಿಸುವ ಪರಿಪಾಠ ಎಲ್ಲೆಡೆ ಇದೆ. ಪುರಾತತ್ವ ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ ಶಾಸನ, ಶಿಲ್ಪಕಲೆ, ಪ್ರತಿಮೆ, ಪುತ್ಥಳಿಗಳನ್ನು ಸಂರಕ್ಷಣೆ ಮಾಡುತ್ತವೆ. ಹಂಪಿ ಸೇರಿದಂತೆ ಹಲವು ಐತಿಹಾಸಿಕ ತಾಣಗಳಲ್ಲಿ ಈ ವಸ್ತುಸಂಗ್ರಹಾಲಯಗಳಿವೆ. ಆದರೆ ಕೋಟೆನಾಡು ಚಿತ್ರದುರ್ಗದಲ್ಲಿ ಸಿಕ್ಕ ಐತಿಹಾಸಿಕ ವಸ್ತುಗಳನ್ನು ಸಂರಕ್ಷಣೆ ಮಾಡಲು ಒಂದು ವಸ್ತಸಂಗ್ರಹಾಲಯ ಇಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕೋಟೆನಾಡಿನ ವಿವಿಧೆಡೆ ಸಿಕ್ಕಿರುವ ಪ್ರಾಗೈತಿಹಾಸಿಕ ವಸ್ತುಗಳು ನೆರಳಿಲ್ಲದೇ ನರಳುವ ಪರಿಸ್ಥಿತಿ ಸೃಷ್ಟಿಯಾಗಿದೆ.ಹೊಸ ತಲೆಮಾರಿನವರಿಗೆ ಇತಿಹಾಸ ಪರಿಚಯಿಸಬೇಕಿದ್ದ ನಗರದ ಪ್ರಾಚ್ಯವಸ್ತು ಸಂಗ್ರಹಾಲಯ ಸುಸಜ್ಜಿತ ಜಾಗದ ಕೊರತೆಯಿಂದ ಅಜ್ಞಾತವಾಗಿಯೇ ಉಳಿದಿದೆ. ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯನ್ನು ಕೂಗಿ ಹೇಳಬೇಕಾಗಿದ್ದ ಸಾವಿರಾರು ಶಾಸನ, ಶಿಲ್ಪಕಲಾಕೃತಿಗಳು ಕೇವಲ 2 ಕೊಠಡಿಯೊಳಗೆ ಬಂಧಿಯಾಗಿ ನರಳುತ್ತಿವೆ. ಇನ್ನೂ ಕೆಲವು ವಸ್ತುಗಳು ಬಯಲಲ್ಲೇ ಬಿದ್ದಿವೆ.ಶಾತವಾಹನರಿಂದ ನಾಯಕ ಅರಸರವರೆಗೂ ಚಿತ್ರದುರ್ಗ ಹಲವು ರಾಜ- ಮಹಾರಾಜರ ಆಳ್ವಿಕೆಗೆ ಒಳಪಟ್ಟಿತ್ತು. ರಾಜಾಳ್ವಿಕೆಯ ಕುರುಹುಗಳು ಇಂದಿಗೂ ಜೀವಂತವಾಗಿ ಉಳಿದಿವೆ. ಶಿಲಾಯುಗದ ಪಳಯುಳಿಕೆಗಳು ಕೂಡ ಉತ್ಖನನದ ವೇಳೆ ಪತ್ತೆಯಾಗಿವೆ. ಶಾಸನ, ದೇವರ ಮೂರ್ತಿ, ಶಿಲ್ಪಕಲಾಕೃತಿ, ತಾಳೆಗರಿ ಹಸ್ತಪ್ರತಿ ಸೇರಿ ಸಾವಿರಾರು ಕುರುಹುಗಳು, ಸ್ಮಾಕರಗಳು ಶತಮಾನಗಳ ಪರಂಪರೆಯ ಮೇಲೆ ಬೆಳಕು ಚೆಲ್ಲುತ್ತಿವೆ.ಸ್ಥಳೀಯ ಆಡಳಿತ ವ್ಯವಸ್ಥೆ ಈ ಸ್ಮಾರಕಗಳಿಗೊಂದು ಸ್ಥಳ ನೀಡದ ಕಾರಣ ಪಳಿಯುಳಿಕೆಗಳು ದೂಳು ತಿನ್ನುತ್ತಿವೆ. ಕೋಟೆಯ ರಂಗಯ್ಯನ ಬಾಗಿಲು ಕೆಳಗಿರುವ 2 ಸಣ್ಣ ಕೊಠಡಿಯೊಳಗೆ ಸ್ಮಾಕರಗಳನ್ನು ಇಡಲಾಗಿದ್ದು ಯಾರ ಕಣ್ಣಿಗೂ ಬೀಳದಾಗಿದೆ. ಸ್ಟೋರ್ ರೂಮ್ನಂತಿರುವ ಕತ್ತಲ ಕೋಣೆಯಲ್ಲಿ ಅಪರೂಪದ ಸ್ಮಾರಗಳನ್ನು ‘ಬಂಧಿಸಿಟ್ಟಿರುವುದು’ ಇತಿಹಾಸಪ್ರಿಯರಿಗೆ ನೋವುಂಟು ಮಾಡಿದೆ.PV WEB Exclusive: ಮಳೆಗಾಲ ಬಂದರೆ ಮಲೆನಾಡಿನಲ್ಲಿ ಭೂಕುಸಿತದ ಭಯWeb Exclusive | ಎಚ್ಡಿಕೆ ಪ್ರವೇಶ: ಬದಲಾಗುವುದೇ ಜಂಗಮಕೋಟೆ ಭೂ ಹೋರಾಟದ ಚಿತ್ರಣಇಲ್ಲಿಯ ಸ್ಮಾಕಗಳನ್ನು ರಾಜ್ಯ ಪುರಾತತ್ವ ಇಲಾಖೆ ನಿರ್ವಹಿಸುತ್ತಿದೆ. ದಶಕಗಳಿಂದಲೂ ಸ್ಥಳೀಯ ಆಡಳಿತ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಭೂಮಿ ನೀಡದೇ ನಿರ್ಲಕ್ಷಿಸುತ್ತಲೇ ಬಂದಿದೆ. ಹೀಗಾಗಿ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಮಾರಕಗಳನ್ನು 15X20 ಅಡಿ ಅಳತೆಯ ಕೊಠಡಿಯೊಳಗೆ ತುಂಬಿದ್ದು ಸ್ಮಾರಕಗಳು ಜನರ ಕಣ್ಣಿಗೆ ಬೀಳದಾಗಿವೆ. ಕನಿಷ್ಠ ಫಲಕವನ್ನೂ ಅಳವಡಿಸದ ಕಾರಣ ವಸ್ತು ಸಂಗ್ರಹಾಲಯದ ಪರಿಚಯ ಸ್ಥಳೀಯರಿಗೂ ಇಲ್ಲದಾಗಿದೆ.ಕೊಠಡಿಯೊಳಗಿಟ್ಟು ಉಳಿಕೆಯಾದ ಸ್ಮಾರಕಗಳನ್ನು ರಂಗಯ್ಯನ ಬಾಗಿಲು ಗೋಡೆಯ ಬದಿಯಲ್ಲಿ ಇಡಲಾಗಿದೆ. ಶಾಸನಗಳು, ವೀರಗಲ್ಲು, ಮಾಸ್ತಿಗಲ್ಲು, ಮಹಾಸತಿಗಲ್ಲು ಸೇರಿದಂತೆ ಅಲ್ಲಿ ನೂರಾರು ಸ್ಮಾರಕಗಳಿವೆ. ಅಲ್ಲೂ ಜಾಗ ಸಾಕಾಗದೇ ಮತ್ತಷ್ಟು ಸ್ಮಾರಕಗಳನ್ನು ಸಮೀಪದ ಉದ್ಯಾನದಲ್ಲಿ ಇಡಲಾಗಿದೆ. ಯಾವುದೇ ರಕ್ಷಣೆಯೂ ಇಲ್ಲದ ಕಾರಣ ಶಾಸನಗಳು ಮಳೆ, ಬಿಸಿಲಿಗೆ ಸವೆಯುತ್ತಿವೆ. ಪಾಚಿ ಕಟ್ಟಿಕೊಂಡಿರುವ ಕಾರಣ ಕಲ್ಲಿನ ಬಣ್ಣ ಮಾಸಿದೆ.ಅಪರೂಪದ ಸ್ಮಾರಕ; ಕೊಠಡಿಯೊಳಗೆ ಸೋಜಿಗ ಎನಿಸುವ ಹಲವು ಅಪರೂಪದ ಪಳಯುಳಿಕೆಗಳಿವೆ. ನಾಯಕ ಅರಸರು ಬಳಸುತ್ತಿದ್ದ ಕತ್ತಿ, ಗುರಾಣಿ, ಫಿರಂಗಿ, ಗುಂಡು, ಚಂದ್ರಾಯುಧ, ಭರ್ಜಿಗಳಿವೆ. ಆಗಿನ ಕಾಲದ ಜನರು ಬಳಸುತ್ತಿದ್ದ ಸೇರು, ಪಾವು, ಪಿಂಗಾಣಿ ಪಾತ್ರೆಗಳಿವೆ. ನಾಯಕರ ಅಪರೂಪದ ಛಾಯಾಚಿತ್ರಗಳನ್ನೂ ಇಲ್ಲಿ ಇಡಲಾಗಿದೆ.ಜಿಲ್ಲೆಯ ವಿವಿಧೆಡೆ ಸಿಕ್ಕ ಕಲ್ಲಿನ ವಿಗ್ರಹಗಳನ್ನು ಸಂಗ್ರಹಿಡಲಾಗಿದೆ. ರುಂಡಮಾಲ ಆಂಜನೇಯ ಮೂರುತಿ ಭಕ್ತಿ ಭಾವ ಮೂಡಿಸುತ್ತದೆ. ನಾಯಕರು ಬಳಸುತ್ತಿದ್ದರು ಎನ್ನಲಾದ ಬೆಟ್ಟದ ಸಂಪಿಗೆ ಹೂವನ್ನು ಸಂಗ್ರಹಿಸಿಡಲಾಗಿದೆ. ಜೈನ ಧರ್ಮದ ಹಲವು ವಿಗ್ರಹಗಳು ಇಲ್ಲಿವೆ. ರಘುವಂಶ ಕಾವ್ಯ, ಭಾಗವತ, ವಚನ ಭಾರತ, ಸ್ಕಂದಪುರಾಣ, ಜೋತಿಷ್ಯ ಶಾಸ್ತ್ರ ಮುಂತಾದ ತಾಳೆಗರಿ ಗ್ರಂಥಗಳನ್ನೂ ಇಲ್ಲಿಡಲಾಗಿದೆ.ಹೆಳವನಕಟ್ಟೆ ಗಿರಿಯಮ್ಮ ಅವರ ಕೈಬರಹದ ‘ಚಂದ್ರಹಾಸ ಸಾಂಗತ್ಯ‘ ಹಸ್ತಪ್ರತಿ ಇಲ್ಲಿರುವ ಅಪರೂಪದ ಕೃತಿ. ನವ ಶಿಲಾಯುಗದ ಆಯುಧಗಳು, ಮಡಕೆ, ಮಣ್ಣಿನ ಪಾತ್ರೆ, ತಾಮ್ರ–ಸೀಸದ ನಾಣ್ಯಗಳು, ಮಣ್ಣಿನ ಆಭರಣಗಳು ಕೂಡ ಇಲ್ಲಿವೆ. ಚಂದ್ರವಳ್ಳಿ ನಾಣ್ಯಗಳು, ಬ್ರಹ್ಮಗಿರಿ ಶಾಸನ, ಹುಲೇಗೊಂಧಿ ಶಾಸನಗಳಿವೆ.Web Exclusive | ಚಾಮರಾಜನಗರ: ರಣಹದ್ದು, ಕೆನ್ನಾಯಿಗಳ ಸಂತತಿ ವೃದ್ಧಿWeb Exclusive: ಬೀದರ್ ಕೋಟೆಯೊಳಗೆ ದೇಸಿ ತಂತ್ರಜ್ಞಾನದ ನೀರು ಸರಬರಾಜು ವ್ಯವಸ್ಥೆ‘1950ರಲ್ಲೇ ವಸ್ತು ಸಂಗ್ರಹಾಲಯ ಸ್ಥಾಪನೆಯಾಗಿದ್ದು ಸ್ಮಾರಕಗಳನ್ನು ಪ್ರದರ್ಶನಕ್ಕಿಡಲು ಕನಿಷ್ಠ 5 ಎಕರೆ ಜಾಗಬೇಕು. ದಶಕದಿಂದಲೂ ಜಾಗ ನೀಡಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯನ್ನು ತೋರುತ್ತದೆ. ಪ್ರಯತ್ನಪಟ್ಟರೆ ಅಂತರರಾಷ್ಟ್ರೀಯ ಗುಣಮಟ್ಟದ ವಸ್ತು ಸಂಗ್ರಹಾಲಯ ಅಭಿವೃದ್ಧಿಗೊಳಿಸಬಹುದು’ ಎಂದು ಯುವ ಸಂಶೋಧಕ ಎನ್.ಎಸ್.ಮಹಾಂತೇಶ್ ಹೇಳುತ್ತಾರೆ.ಮಸೀದಿಯ ಆಕರ್ಷಣೆ: ಕಳ್ಳತನವಾಗಿ ನಂತರ ಪೊಲೀಸರಿಗೆ ಸಿಕ್ಕ ಹಲವು ಶಿಲ್ಪಾ ಕಲಾಕೃತಿಗಳನ್ನು ಈ ಕೊಠಡಿಗಳಲ್ಲಿ ಇಡಲಾಗಿದೆ. ಅದರಲ್ಲಿ ಮಸೀದಿ ಕಲಾಕೃತಿಯೂ ಒಂದಾಗಿದ್ದು ಬಳಪದ ಕಲ್ಲಿನ ಸುಂದರ ಕೆತ್ತನೆ ಗಮನ ಸೆಳೆಯುತ್ತದೆ. ಲಕ್ಷ್ಮಿ, ಕಾವೇರಿ, ಶಾರದೆ ಹಾಗೂ ಬುದ್ಧನ ವಿಗ್ರಹಗಳು ಕೂಡ ನೋಡುಗರ ಮನಸೂರೆಗೊಳ್ಳುತ್ತವೆ. ಯುದ್ಧದಲ್ಲಿ ಸತ್ತ ಕುದುರೆಯ ಹಲ್ಲುಗಳನ್ನು ಕೂಡ ಸಂಗ್ರಹ ಮಾಡಿ ಇಟ್ಟಿರುವುದು ವಿಶೇಷಗಳಲ್ಲೊಂದು.ಅರಸರ ಉಕ್ಕಿನ ಕವಚ ನಾಯಕ ಅರಸರು ಯುದ್ಧದ ಸಂದರ್ಭದಲ್ಲಿ ಧರಿಸುತ್ತಿದ್ದ ಉಕ್ಕಿನ ಕವಚ ಕೂಡ ಕೊಠಡಿಯೊಳಗಿದೆ. ನಾಯಕರ ಆಯುಧಗಳನ್ನು ಗಾಜಿನ ಶೋಕೇಸ್ನಲ್ಲಿ ಸಂಗ್ರಹ ಮಾಡಿ ಇಡಲಾಗಿದೆ. ಆದರೆ ಸುಸಜ್ಜಿತ ವಸ್ತು ಸಂಗ್ರಹಾಲಯ ಇಲ್ಲದಿರುವುದು ಈ ಅಪರೂಪದ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.‘ಕಲ್ಲಿನ ಕೋಟೆ ಎದುರಿನ ಫಿಲ್ಟರ್ ಹೌಸ್ ಇರುವ 100X80 ಅಳತೆಯ ಜಾಗದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ₹ 10 ಕೋಟಿ ವೆಚ್ಚದ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ಹೇಳಿದರು.PV WEB Exclusive: ಲಾಠಿ ಏಟಿಗೆ ಕುಗ್ಗಲ್ಲ; ಪ್ರಾಣ ಹೋದರೂ ಒಂದಿಂಚು ಭೂಮಿ ಕೊಡಲ್ಲWeb Exclusive: ಬತ್ತಿದ್ದ ಕೆರೆ, ಬಾವಿಗಳಿಗೆ ಜೀವ ತುಂಬುವ ‘ಪ್ಯಾಸ್’ ಫೌಂಡೇಷನ್!