Web Exclusive: ರಾಜಶಾಹಿಯ ಕಾಲದ ಅರಮನೆ ಪ್ರಜಾಶಾಹಿ ವ್ಯವಸ್ಥೆಯಲ್ಲೀಗ ಅತಿಥಿ ಗೃಹ
ಕಲಬುರಗಿ ಐತಿಹಾಸಿಕ ನಗರ. ರಾಷ್ಟ್ರಕೂಟರು, ಚಾಲುಕ್ಯರು, ಕಲಚೂರಿ ಅರಸರು, ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು, ವಾರಂಗಲ್ನ ಕಾಕತೀಯರು, ದೆಹಲಿಯ ಸುಲ್ತಾನರು, ಬಹಮನಿ ಸುಲ್ತಾನರು, ಮೊಘಲರು ಹಾಗೂ ಹೈದರಾಬಾದ್ನ ನಿಜಾಮರ ಆಳ್ವಿಕೆ ಕಂಡ ನೆಲ.ಈ ಪ್ರದೇಶವು ವಿವಿಧ ರಾಜಾಡಳಿತಕ್ಕೆ ಒಳಪಟ್ಟಾಗೆಲ್ಲ ಸಹಜವಾಗಿಯೇ ಅವರೆಲ್ಲ ಅಭಿರುಚಿಯ ಕಲೆ, ವಾಸ್ತುಶಿಲ್ಪಗಳು ಈ

ಕಲಬುರಗಿ ಐತಿಹಾಸಿಕ ನಗರ. ರಾಷ್ಟ್ರಕೂಟರು, ಚಾಲುಕ್ಯರು, ಕಲಚೂರಿ ಅರಸರು, ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು, ವಾರಂಗಲ್ನ ಕಾಕತೀಯರು, ದೆಹಲಿಯ ಸುಲ್ತಾನರು, ಬಹಮನಿ ಸುಲ್ತಾನರು, ಮೊಘಲರು ಹಾಗೂ ಹೈದರಾಬಾದ್ನ ನಿಜಾಮರ ಆಳ್ವಿಕೆ ಕಂಡ ನೆಲ.ಈ ಪ್ರದೇಶವು ವಿವಿಧ ರಾಜಾಡಳಿತಕ್ಕೆ ಒಳಪಟ್ಟಾಗೆಲ್ಲ ಸಹಜವಾಗಿಯೇ ಅವರೆಲ್ಲ ಅಭಿರುಚಿಯ ಕಲೆ, ವಾಸ್ತುಶಿಲ್ಪಗಳು ಈ ಪ್ರದೇಶದ ಶ್ರೀಮಂತಿಕೆ ಹೆಚ್ಚಿಸಿವೆ. ರಾಜಶಾಹಿ ಆಳ್ವಿಕೆಯಿಂದ ದೂರವಾಗಿ ಪ್ರಜಾಶಾಹಿ ಸ್ಥಾಪನೆಯಾಗಿ ದಶಕಗಳೇ ಉರುಳಿವೆ. ಈಗಲೂ ಶತಮಾನಗಳ ಹಿಂದಿನ ಕಟ್ಟಡಗಳು ಬಾಳಿಕೆ, ಕಲಾಕುಸುರಿ ಹಾಗೂ ಶ್ರೀಮಂತ ವಾಸ್ತುಶಿಲ್ಪದಿಂದ ಮನಸೂರೆಗೊಳ್ಳುತ್ತವೆ. ಕಲಬುರಗಿಯಲ್ಲಿ ಅಂಥ ಅಸಂಖ್ಯ ಸ್ಮಾರಕಗಳಿವೆ. ಅದರಲ್ಲಿ ಪ್ರಮುಖವಾದದ್ದು ‘ಐವಾನ್–ಎ–ಶಾಹಿ’.‘ಐವಾನ್–ಎ–ಶಾಹಿ’ ಎಂಬುದು ಪರ್ಷಿಯನ್ ಪದಗಳು. ‘ಐವಾನ್’ ಎಂದರೆ ಅರಮನೆ. ‘ಶಾಹಿ’ ಎಂದರೆ ರಾಜ. ‘ರಾಜನ ಅರಮನೆ’ ಎಂಬುದು ಅದರ ಯಥಾರ್ಥ. 1911ರಿಂದ 1948ರ ತನಕ ಆಳ್ವಿಕೆ ನಡೆಸಿದ ಹೈದರಾಬಾದ್ ಸಂಸ್ಥಾನದ ಕೊನೆಯ ಹಾಗೂ ಏಳನೇ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಬಹಾದ್ದೂರ ಕಲಬುರಗಿಗೆ ಬಂದಾಗ ಈ ಅರಮನೆಯಲ್ಲಿ ತಂಗುತ್ತಿದ್ದ.ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಅದು ಈಗ ಗಣ್ಯಾತೀಗಣ್ಯರ ‘ಅತಿಥಿ ಗೃಹ’ವಾಗಿ ಬಳಕೆಯಾಗುತ್ತಿದೆ. ಅದನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆ. ದೇಶದ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು ಕಲಬುರಗಿಗೆ ಬಂದರೆ ವಾಸ್ತವ್ಯ ಹೂಡುವ ತಾಣವಾಗಿದೆ. 2023ರಲ್ಲಿ ಕಲಬುರಗಿಗೆ ಬಂದಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ‘ಐವಾನ್–ಎ–ಶಾಹಿ’ಯಲ್ಲೇ ತಂಗಿದ್ದರು. ಮುಖ್ಯಮಂತ್ರಿ ಕಲಬುರಗಿ ಭೇಟಿ ನೀಡಿದಾಗಲೂ ಅವರ ವಾಸ್ತವ್ಯ ಹೂಡುವ ಶಾಶ್ವತ ತಾಣ ಇದೇ ಆಗಿದೆ.ಆಯತಾಕಾರದ ಈ ಅರಮನೆಯನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಒಂದು ಭಾಗ ಅತಿಥಿ ಗೃಹವಾಗಿ ಬಳಸುತ್ತಿದ್ದರೆ, ಇನ್ನೊಂದು ಭಾಗವು ಕಲಬುರಗಿ ಪ್ರಾದೇಶಿಕ ಆಯುಕ್ತರ ಸರ್ಕಾರಿ ನಿವಾಸವಾಗಿ ಬಳಕೆಯಾಗುತ್ತಿದೆ.ಕಲಬುರಗಿಯಲ್ಲಿರುವ ಐವಾನ್–ಎ–ಶಾಹಿ ಅತಿಥಿ ಗೃಹದ ವಿಶಾಲ ಹಜಾರ...ಐವಾನ್–ಎ–ಶಾಹಿ ಶ್ರೀಮಂತಿಕೆ...16.26 ಎಕರೆ ಪ್ರದೇಶದ ನಟ್ಟನಡುವೆ ಆಯತಾಕಾರದಲ್ಲಿ ಐವಾನ್–ಎ–ಶಾಹಿ ಕಟ್ಟಡವಿದೆ. ಇದರ ಮುಖ್ಯದ್ವಾರವೂ ಕಲ್ಲಿನ ವಿಶಿಷ್ಟ ಜೋಡಣೆಯಿಂದ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.ಗೇಟ್ನಿಂದ ಒಳಗೆ ಅಡಿಯಿಟ್ಟರೆ 100 ಮೀಟರ್ ದೂರದಲ್ಲಿ ಭವ್ಯ ಕಟ್ಟಡ ಕಾಣತ್ತದೆ. ದಾರಿಯ ಎರಡೂ ಬದಿಗೆ ಉದ್ಯಾನದ ಜಾಗವಿದೆ. ಅದನ್ನು ದಾಟಿ ಮುನ್ನಡೆದರೆ ಕಪ್ಪು ಹಾಗೂ ಸುಣ್ಣದ ಕಲ್ಲಿನಲ್ಲಿ ಮೈವೆತ್ತ ಸುಂದರ ಸ್ಮಾರಕವೇ ಐವಾನ್–ಎ–ಶಾಹಿ. ವಿಶಿಷ್ಟ ರಚನೆಯಿಂದ ಕಂಗೊಳಿಸುವ ಈ ಭವ್ಯ ಕಟ್ಟಡವು 19ನೇ ಶತಮಾನದಲ್ಲಿ ರಚನೆಯಾಗಿದೆ. ಇಂಡೋ ಸಾರ್ಸೆನಿಕ್ ಶೈಲಿಯಲ್ಲಿದೆ. ಈ ಕಟ್ಟಡದ ಮುಂಭಾಗವನ್ನು ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪಕ್ಕದ ಗೋಡೆಗಳನ್ನು ಜಿಗ್ ಜಾಗ್ ಮಾದರಿಯಲ್ಲಿ ಕಟ್ಟಿರುವುದು ವಿಶೇಷ.ಮುಖ್ಯದ್ವಾರ ಸೇರಿದಂತೆ ಹತ್ತಾರು ಬಾಗಿಲುಗಳು, ಕಿಟಕಿಗಳ ವಿನ್ಯಾಸವೆಲ್ಲವೂ ಕಮಾನು ಆಕೃತಿಯಲ್ಲಿವೆ. ಇದರಿಂದ ಕಬ್ಬಿಣದ ಬಳಕೆ ಇಲ್ಲದೇ ಬರೀ ಕಲ್ಲಿನ ಜೋಡಣೆಯಿಂದ ರೂಪಿಸಿದ್ದು, ಕಟ್ಟಡದ ಸೌಂದರ್ಯ ಹೆಚ್ಚಿಸಿದೆ. ಕಟ್ಟಡದ ತುಂಬೆಲ್ಲ ಸುಣ್ಣದ ಕಲ್ಲನ್ನು ಗೋಡೆಗಳಿಗೆ ಬಳಸಿದರೆ, ಕಪ್ಪು ಕಲ್ಲನ್ನು ಮುಖ್ಯದ್ವಾರ ಸೇರಿದಂತೆ ಬಾಗಿಲು, ಕಿಟಕಿಗಳು, ಕಿಂಡಿಗಳ ವಿನ್ಯಾಸಕ್ಕೆ ಉಪಯೋಗಿಸಲಾದೆ. ಕಟ್ಟಡದ ಒಳಗೆ ಅಡಿಯಿಟ್ಟರೆ ವಿಶಾಲ ಪ್ರಾಂಗಣ, ವಿಶ್ರಾಂತಿ ಕೋಣೆಗಳು, ಅಡುಗೆ ಮನೆ, ಸ್ನಾನಗೃಹಗಳನ್ನು ಒಳಗೊಂಡಿದೆ. ದಿವಾನ್-ಎ-ಖಾಸ್ ಎಂಬ ವಿಶೇಷ ಅತಿಥಿಗಳಿಗಾಗಿ ಮೀಸಲಾದ ಕೊಠಡಿಗಳನ್ನು ಒಳಗೊಂಡಿದೆ. ಸದ್ಯ ನಾಲ್ಕು ಸೂಟ್ ರೂಂಗಳಿವೆ(ಐಷಾರಾಮಿ ಕೊಠಡಿ).ಕಲಬುರಗಿಯಲ್ಲಿರುವ ಐವಾನ್–ಎ–ಶಾಹಿ ಅತಿಥಿ ಗೃಹದ ಕಟ್ಟಡದ ಒಳನೋಟವಿಶಾಲ ಪ್ರಾಂಗಣವೂ ಸೇರಿದಂತೆ ಇಡೀ ಕಟ್ಟಡದ ಚಾವಣಿ 20 ಅಡಿಗಳಷ್ಟು ಎತ್ತರವಾಗಿದೆ. ಚಾವಣಿಯ ಅಡಿಯ ಗೋಡೆಗೆ ಸಣ್ಣ ಕಿಂಡಿಗಳಿವೆ. ಅವು ಏಕಕಾಲಕ್ಕೆ ಬೆಳಕನ್ನು ಒದಗಿಸುವ ಜೊತೆಗೆ ನೈಸರ್ಗಿಕ ಹವಾ ನಿಯಂತ್ರಿತ ವ್ಯವಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತವೆ. ಎದುರಿನ ಉದ್ಯಾನಗಳ ಮೂಲಕ ಬೀಸಿ ಬರುವ ತಂಗಾಳಿಯು ಈ ಕಟ್ಟಡವನ್ನು ಪ್ರವೇಶಿಸಿ, ನಿಧಾನಕ್ಕೆ ಮೇಲ್ಮುಖವಾಗಿ ಚಲಿಸಿ ಹೊರಹೊರುವಂತೆ ವಿನ್ಯಾಸಗೊಳಿಸಲಾಗಿದೆ. ಈಗ ಚಾಲ್ತಿಯಲ್ಲಿರುವ ‘ಹಸಿರು ಕಟ್ಟಡ’ ಪರಿಕಲ್ಪನೆಯಡಿ ಶತಮಾನಗಳ ಹಿಂದೆಯೇ ಈ ಕಟ್ಟಡ ನಿರ್ಮಿಸಿದ್ದು ವಿಶೇಷ.ಇನ್ನು, ಈ ಕಟ್ಟಡದ ಕಲ್ಲಿನ ಕೆತ್ತನೆಗಳ ಕುಸುರಿ ಕೆಲಸ ಚಿತ್ತಾಕರ್ಷಕವಾಗಿದೆ. ಅಂದಿನ ಕುಶಲಕರ್ಮಿಗಳ ಬದ್ಧತೆ ಹಾಗೂ ಕಲಾನೈಪುಣ್ಯಕ್ಕೆ ಧ್ಯೋತಕವಾಗಿದೆ. ಕಟ್ಟಡದ ಒಳಗೆ ಸಾಗುವಾನಿ ಕಟ್ಟಿಗೆ ಬಳಸಲಾಗಿದೆ. ಈ ಕಟ್ಟಡದ ಸುತ್ತಲೂ ಸುಂದರ ಉದ್ಯಾನ ನಿರ್ಮಿಸಲಾಗಿದೆ. ವೈವಿಧ್ಯಮಯವಾದ ಗಿಡ–ಮರಗಳು, ಆಲಂಕಾರಿಕ ಸಸ್ಯಗಳನ್ನು ಹೊಂದಿವೆ.ಭವ್ಯ ಕಟ್ಟಡ ಇರುವ ಆವರಣದ ಬಲಬದಿಗೆ ಸುಂದರ ಹಾಗೂ ವಿಶಾಲ ಕಮಾನುಗಳ ಕಟ್ಟಡ ಗಮನ ಸೆಳೆಯುತ್ತದೆ. ಅದು ದಿವಾನ್–ಎ-ಆಮ್/ ಸಮಾ ಖಾನಾ. ಅಂದು ಶ್ರೀಸಾಮಾನ್ಯರು ತಮ್ಮ ಕುಂದು–ಕೊರತೆಗಳು, ಅಹವಾಲುಗಳ ಸಲ್ಲಿಕೆಗೆ ನಿಜಾಮರ ಭೇಟಿಗಾಗಿ ಕಾಯುವ ಸ್ಥಳವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.ದಿವಾನ್–ಎ–ಆಮ್...ಕಲಬುರಗಿಯಲ್ಲಿರುವ ಐವಾನ್–ಎ–ಶಾಹಿ ಅತಿಥಿ ಗೃಹದ ಹೊರ ನೋಟ...ರೈಲು ಹಳಿಯ ಮಾರ್ಗ: ‘ಹೈದರಾಬಾದ್ ನಿಜಾಮರು ಶ್ರೀಮಂತಿಕೆಗೆ ಹೆಸರಾದವರು. ಬ್ರಿಟಿಷ್ ಆಡಳಿತಾವಧಿಯಲ್ಲೇ ಪ್ರತ್ಯೇಕ ರೈಲು ಸೇವೆ ಹೊಂದಿದ್ದರು. ಹೈದರಾಬಾದ್ನಿಂದ ಕಲಬುರಗಿ ಮಾರ್ಗವಾಗಿ ವಾಡಿ ತನಕ ರೈಲು ಜಾಲವಿತ್ತು. ಇನ್ನೂ ವಿಶೇಷವೆಂದರೆ ಕಲಬುರಗಿ ರೈಲ್ವೆ ನಿಲ್ದಾಣದಿಂದ ಐವಾನ್–ಎ–ಶಾಹಿ ಅತಿಥಿ ಗೃಹದ ತನಕ ಪ್ರತ್ಯೇಕ ರೈಲು ಹಳಿ ಇತ್ತು. ನಿಜಾಮರ ಭೇಟಿ ವೇಳೆ ರೈಲು ನೇರವಾಗಿ ಐವಾನ್–ಎ–ಶಾಹಿಗೆ ಬರುತಿತ್ತು ಎಂಬುದಕ್ಕೆ ಐತಿಹ್ಯಗಳಿವೆ. ಈ ರೈಲು ಹಳಿಯ ಕುರಿತು 1919ರಲ್ಲಿ ರೂಪಿಸಿರುವ ನಕ್ಷೆಯಲ್ಲಿ ಅದರ ಗುರುತುಗಳಿವೆ’ ಎಂದು ಹಿರಿಯ ವಾಸ್ತುಶಿಲ್ಪಿ ಭರತ್ ಭೂಷಣ್ ಹೇಳುತ್ತಾರೆ.ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್ಕಲಬುರಗಿಯಲ್ಲಿರುವ ಐವಾನ್–ಎ–ಶಾಹಿ ಅತಿಥಿ ಗೃಹದ ಕಟ್ಟಡ ಮುಖ್ಯದ್ವಾರ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್ಕಲಬುರಗಿಯಲ್ಲಿರುವ ಐವಾನ್–ಎ–ಶಾಹಿ ಅತಿಥಿ ಗೃಹದ ಕಟ್ಟಡ ಮುಖ್ಯದ್ವಾರ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್