WI vs IND | ಸರಣಿ 2–2ರಿಂದ ಸಮ: ಚಿನ್ನಸ್ವಾಮಿ ಅಂಗಳದಲ್ಲಿ ರನ್–ಮಳೆ
ಬೆಂಗಳೂರು: ಆಗಸದಲ್ಲಿ ಕಪ್ಪು ಮೋಡಗಳ ಪಥಸಂಚಲನ. ಚಿನ್ನಸ್ವಾಮಿ ಅಂಗಳದಲ್ಲಿ ನೀಲಿ ರಂಗಿನ ಸಂಚಲನ!ಹೌದು; ಶನಿವಾರ ಸಂಜೆಯಿಂದ ಮಳೆರಾಯನ ಆಟ ಆರಂಭವಾಗಿತ್ತು. ಒಮ್ಮೆ ಜೋರಾಗಿ, ಮತ್ತೊಮ್ಮೆ ಸಣ್ಣದಾಗಿ ಮಳೆಯ ಕಣ್ಣಾಮುಚ್ಚಾಲೆ ನಡೆಯಿತು. ರಾತ್ರಿ ಎಂಟೂವರೆ ಸುಮಾರಿಗೆ ಪೂರ್ತಿ ಮಳೆ ನಿಂತಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್ ಅಲೆ ಎದ್ದಿತು. ‘ವಿರಾಟ್’ ಹೆಸರಿದ್ದ ನೀಲ

ಬೆಂಗಳೂರು: ಆಗಸದಲ್ಲಿ ಕಪ್ಪು ಮೋಡಗಳ ಪಥಸಂಚಲನ. ಚಿನ್ನಸ್ವಾಮಿ ಅಂಗಳದಲ್ಲಿ ನೀಲಿ ರಂಗಿನ ಸಂಚಲನ!ಹೌದು; ಶನಿವಾರ ಸಂಜೆಯಿಂದ ಮಳೆರಾಯನ ಆಟ ಆರಂಭವಾಗಿತ್ತು. ಒಮ್ಮೆ ಜೋರಾಗಿ, ಮತ್ತೊಮ್ಮೆ ಸಣ್ಣದಾಗಿ ಮಳೆಯ ಕಣ್ಣಾಮುಚ್ಚಾಲೆ ನಡೆಯಿತು. ರಾತ್ರಿ ಎಂಟೂವರೆ ಸುಮಾರಿಗೆ ಪೂರ್ತಿ ಮಳೆ ನಿಂತಾಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್ ಅಲೆ ಎದ್ದಿತು. ‘ವಿರಾಟ್’ ಹೆಸರಿದ್ದ ನೀಲಿ ಜೆರ್ಸಿ ತೊಟ್ಟು ಬಂದಿದ್ದ ಅಭಿಮಾನಿಗಳ ಕಂಗಳಲ್ಲಿ ಮಿಂಚು ಹರಿಯಿತು. ಭಾರತದ ಬ್ಯಾಟರ್ಗಳು ಸಿಕ್ಸರ್, ಬೌಂಡರಿಗಳ ಮಿಂಚು ಹರಿಸಿದರು. ಸುಮಾರು ಎರಡೂವರೆ ತಾಸು ವಿಳಂಬವಾಗಿ ಆರಂಭವಾದ ಭಾರತ –ವೆಸ್ಟ್ ಇಂಡೀಸ್ ಟಿ20 ಪಂದ್ಯವನ್ನು ಒಂಬತ್ತು–9 ಓವರ್ಗಳಿಗೆ ‘ಚುಟುಕು’ಗೊಳಿಸಲಾಯಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸುಮಾರು 10 ಗಂಟೆಗೆ ಮತ್ತೆ ಮಳೆ ಆರಂಭವಾಯಿತು. ಆಗ ಭಾರತ 7.4 ಓವರ್ಗಳಲ್ಲಿ 5 ವಿಕೆಟ್ಗಳಿಗೆ 118 ರನ್ ಗಳಿಸಿತು. ಆತಿಥೇಯ ತಂಡದ ಅಭಿಷೇಕ್ ಶರ್ಮಾ (6 ರನ್) ಮೊದಲ ಓವರ್ನಲ್ಲಿಯೇ ಔಟಾದರು. ಆದರೂ ಇಶಾನ್ ಕಿಶನ್ (30; 10ಎ) ಬೀಸಾಟದ ಫಲವಾಗಿ ಕೇವಲ 2.5 ಓವರ್ಗಳಲ್ಲಿ 50 ರನ್ ಗಳಿಸಿತು. ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ‘ಅರ್ಧಶತಕ’ ಇದಾಯಿತು. ಆದರೆ ಅಷ್ಟೊತ್ತಿಗೆ ಎರಡು ವಿಕೆಟ್ ಪತನವಾಗಿದ್ದವು. ಮೊದಲ ಓವರ್ನಲ್ಲಿ ಒಂದು ಸಿಕ್ಸರ್ ಹೊಡೆದಿದ್ದ ಅಭಿಷೇಕ್ ಶರ್ಮಾ ಆರ್ಭಟಿಸುವ ಮುನ್ಸೂಚನೆ ನೀಡಿದ್ದರು. ಆದರೆ ಅದೇ ಓವರ್ನಲ್ಲಿ ಶಾಮರ್ ಜೊಸೆಫ್ ಪಡೆದ ಕ್ಯಾಚ್ಗೆ ಶರ್ಮಾ ನಿರ್ಗಮಿಸಿದರು. ವಿಕೆಟ್ ಪಡೆದ ಕೀಮೊ ಪಾಲ್ ಸಂಭ್ರಮಿಸಿದರು. ಆದರೆ ಕ್ರೀಸ್ಗೆ ಬಂದ ಇಶಾನ್, ಬೌಲರ್ಗಳಿಗೆ ಬಿಸಿ ಮುಟ್ಟಿಸಿದರು. ಲೆಗ್ಸೈಡ್ ವೈಡ್ ರೇಂಜ್ನಲ್ಲಿದ್ದ ಎಸೆತವನ್ನೂ ಸಿಕ್ಸರ್ ಎತ್ತಿದರು. ಕಟ್, ಸ್ವೀಪ್, ಡ್ರೈವ್ಗಳ ಮೂಲಕ ಬೌಂಡರಿಗಳನ್ನೂ ಗಿಟ್ಟಿಸಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ಸಂಜು ಸ್ಯಾಮ್ಸನ್ ಮಾತ್ರ ಚುರುಕಾಗಿ ಆಡಲಿಲ್ಲ. ಶಾಮರ್ ಜೋಸೆಫ್ ಬೌಲಿಂಗ್ನಲ್ಲಿ ಇಶಾನ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ರೋವ್ಮನ್ ಪೊವೆಲ್ ಪಡೆದ ಕ್ಯಾಚ್ಗೆ ನಿರ್ಗಮಿಸಿದರು. ಐದನೇ ಓವರ್ನಲ್ಲಿ ಸಂಜು ಸ್ಯಾಮ್ಸನ್ ಅವರು ಶಾಮರ್ ಸ್ಪ್ರಿಂಗರ್ ಎಸೆತಕ್ಕೆ ಕ್ಲೀನ್ಬೌಲ್ಡ್ ಆದರು. ನಾಯಕ ಶ್ರೇಯಸ್ ಅಯ್ಯರ್ (22; 14ಎ, 4X2) ಬೀಸಾಟದ ಹೊಣೆ ಹೊತ್ತರು. ಇದರಿಂದಾಗಿ ರನ್ ವೇಗ ಹೆಚ್ಚಿತು. ಅಯ್ಯರ್ 18 ರನ್ ಗಳಿಸಿದ್ದಾಗ ರುದರ್ಫೋರ್ಡ್ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದರು. ಆದರೆ ಸ್ವಲ್ಪ ಹೊಂದಿನ ನಂತರ ಅಯ್ಯರ್ ಅವರನ್ನು ಕಿಮೋ ಪಾಲ್ ಔಟ್ ಮಾಡಿದರು. ಕ್ರೀಸ್ಗೆ ಬಂದ ನಮನ್ ಧೀರ್ ಕೇವಲ 6 ಎಸೆತಗಳಲ್ಲಿ 24 ರನ್ ಸೂರೆ ಮಾಡಿದರು. ಅದರಲ್ಲಿ ಮೂರು ಸಿಕ್ಸರ್ಗಳಿದ್ದವು. ಇದರಿಂದಾಗಿ 6.4 ಓವರ್ಗಳಲ್ಲಿ ತಂಡವು 100 ರನ್ ಗಳಿಸಿತು. ಕ್ರೀಡಾಂಗಣದ ಗ್ಯಾಲರಿಯಲ್ಲಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಸಂತಸದಲ್ಲಿ ತೇಲುತ್ತಿದ್ದರು. ಆರ್ಸಿಬಿ..ಆರ್ಸಿಬಿ.. ಎಂದು ಕೂಗುತ್ತಿದ್ದರು. ಡಗ್ಔಟ್ನಲ್ಲಿದ್ದ ಭುವನೇಶ್ವರ್ ಕುಮಾರ್ ಅವರನ್ನೂ ‘ಭುವಿ ಭುವಿ..’ ಎಂದು ಕೂಗುತ್ತಿದ್ದರು. ಡಿಜೆ ಸಂಗೀತ ಅಬ್ಬರದಲ್ಲಿ ತೇಲುತ್ತಿದ್ದರು. ಆದರೆ ಆಗಲೇ ಶುರುವಾದ ಮಳೆ ಅವರ ಉತ್ಸಾಹಕ್ಕೆ ತಣ್ಣೀರೆರಚಿತು!ಸಂಕ್ಷಿಪ್ತ ಸ್ಕೋರು: ಭಾರತ: 7.4 ಓವರ್ಗಳಲ್ಲಿ 5ಕ್ಕೆ118 (ಸಂಜು ಸ್ಯಾಮ್ಸನ್ 16, ಅಭಿಷೇಕ್ ಶರ್ಮಾ 6, ಇಶಾನ್ ಕಿಶನ್ 30, ಶ್ರೇಯಸ್ ಅಯ್ಯರ್ 22, ತಿಲಕ್ ವರ್ಮಾ 7, ನಮನ್ ಧೀರ್ ಬ್ಯಾಟಿಂಗ್ 24, ಕೀಮೊ ಪಾಲ್ 34ಕ್ಕೆ2, ಶಾಮರ್ ಸ್ಪ್ರಿಂಗರ್ 17ಕ್ಕೆ2, ಶಾಮರ್ ಜೋಸೆಫ್ 18ಕ್ಕೆ1)