World Chimpanzee Day: ಕರ್ನಾಟಕದ ಮೃಗಾಲಯದಲ್ಲಿದೆ ಏಷ್ಯಾದ ಹಿರಿಯ ಚಿಂಪಾಂಜಿ
ಚಿಂಪಾಂಜಿಗಳು ಕಾಡಿನಲ್ಲಿ ಮಾತ್ರವಲ್ಲ. ಜಗತ್ತಿನ ಪ್ರಮುಖ ಮೃಗಾಲಯಗಳು, ಪ್ರಾಣಿ ಸಂಗ್ರಹಾಲಯದಲ್ಲಿ ಜನರ ವೀಕ್ಷಣೆ, ಅಧ್ಯಯನಕ್ಕೂ ದಾರಿ ಮಾಡಿಕೊಟ್ಟಿವೆ. ಕರ್ನಾಟಕದಲ್ಲೂ ಚಿಂಪಾಂಜಿಗಳನ್ನು ನೋಡಬೇಕು ಎಂದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಹೋಗಬೇಕು. ದಶಕಗಳಿಂದಲೂ ಮೈಸೂರು ಮೃಗಾಲಯದಲ್ಲಿ ಯಶಸ್ವಿಯಾಗಿ ಚಿಂಪಾಂಜಿ ಪ್ರದರ್ಶನ, ಸಂತಾನಾಭಿವೃದ್ಧಿ ನಡೆಸಲಾಗುತ್ತಿದೆ.ವಾಲಿ

ಚಿಂಪಾಂಜಿಗಳು ಕಾಡಿನಲ್ಲಿ ಮಾತ್ರವಲ್ಲ. ಜಗತ್ತಿನ ಪ್ರಮುಖ ಮೃಗಾಲಯಗಳು, ಪ್ರಾಣಿ ಸಂಗ್ರಹಾಲಯದಲ್ಲಿ ಜನರ ವೀಕ್ಷಣೆ, ಅಧ್ಯಯನಕ್ಕೂ ದಾರಿ ಮಾಡಿಕೊಟ್ಟಿವೆ. ಕರ್ನಾಟಕದಲ್ಲೂ ಚಿಂಪಾಂಜಿಗಳನ್ನು ನೋಡಬೇಕು ಎಂದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಹೋಗಬೇಕು. ದಶಕಗಳಿಂದಲೂ ಮೈಸೂರು ಮೃಗಾಲಯದಲ್ಲಿ ಯಶಸ್ವಿಯಾಗಿ ಚಿಂಪಾಂಜಿ ಪ್ರದರ್ಶನ, ಸಂತಾನಾಭಿವೃದ್ಧಿ ನಡೆಸಲಾಗುತ್ತಿದೆ.ವಾಲಿ ಸುಗ್ರೀವರ ಪ್ರವರಮೈಸೂರು ಮೃಗಾಲಯದಲ್ಲಿದ್ದರು ವಾಲಿ, ಸುಗ್ರೀವ. ರಾಮಾಯಣ ಪುರಾಣ ಕಥನದ ವಾನರ ಸೇನೆಯಲ್ಲಿ ವಾಲಿ, ಸುಗ್ರೀವರಿಗೆ ಪ್ರಮುಖ ಪಾತ್ರ. ಅಂಥದೇ ಹೆಸರಿನ ಚಿಂಪಾಂಜಿಗಳು ಮೈಸೂರು ಮೃಗಾಲಯದಲ್ಲಿದ್ದವು. ಮೈಸೂರು ಮೃಗಾಲಯದಲ್ಲಿ ಮ್ಯಾಕ್ಸ್ ಮತ್ತು ಮೀನಾ ಚಿಂಪಾಂಜಿ ದಂಪತಿಗೆ ಜನಿಸಿದವು ಮೂರು ಗಂಡು ಮರಿಗಳು. ಅದರಲ್ಲಿ ವಾಲಿ ಹಿರಿಯ. ಸುಗ್ರೀವ ಕಿರಿಯ.ಇದರಲ್ಲಿ ವಾಲಿಯಂತೂ ಸ್ನೇಹಪ್ರಿಯ. ಸದಾ ಚಟುವಟಿಕೆಯಿಂದ ಪ್ರಾಣಿ ಪ್ರಿಯರನ್ನು ಸೆಳೆಯುತ್ತಿದ್ದ. ಜನನದ ಸಮಯದಲ್ಲಿ ತಾಯಿ ಅವನಿಗೆ ಹಾಲು ನೀಡಲು ನಿರಾಕರಿಸಿತು. ಆಗ ಅವನನ್ನು ಮೃಗಾಲಯದ ಸಿಬ್ಬಂದಿಯೇ ಬಾಟಲಿ ಹಾಲು ಕುಡಿಸಿ ಸಾಕಿದರು. ಈ ಕಾರಣದಿಂದಲೋ ಏನೋ ಸಿಬ್ಬಂದಿ ಕಂಡರೆ ವಾಲಿಗೂ ಪ್ರೀತಿ ಇತ್ತು.ಶಿಳ್ಳೆ ಹೊಡೆತ್ತಿದ್ದುದು, ಚಪ್ಪಾಳೆ ತಟ್ಟಿ ಜನರನ್ನು ಆಕರ್ಷಿಸುತ್ತಿದ್ದುದು, ಜನರ ಕ್ರಿಯೆಗೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದುದು ಆತನ ವಿಶೇಷ. ಕೊನೆ ದಿನಗಳಲ್ಲಿ ಒಬ್ಬಂಟಿಯಾಗಿ ಭೀಷ್ಮ ರೂಪವನ್ನು ಪಡೆದಿದ್ದ ವಾಲಿ. 13 ವರ್ಷದ ಹಿಂದೆ ವಾಲಿ ವಯೋಸಹಜ ಕಾರಣದಿಂದ ತೀರಿಕೊಂಡ. ಆತನ ಸಹೋದರ ಸುಗ್ರೀವ 1986ರಲ್ಲಿಯೇ ಜಠರದ ಉರಿಯೂತದಿಂದ ಕೊನೆಯುಸಿರೆಳೆದಿದ್ದ.ಕಪಿಲ್ ದೇವ್ ಬಂದವಾಲಿ ಹಾಗೂ ಸುಗ್ರೀವನ ನಂತರ ಮೂರನೆಯವನು ಕಪಿಲ್ದೇವ್. ಕ್ರಿಕೆಟಿಗ ಕಪಿಲ್ ದೇವ್ ನೇತೃತ್ವದಲ್ಲಿ ಭಾರತವು 1983 ರ ಜೂನ್ 25ರಂದು ವಿಶ್ವಕಪ್ ಗೆದ್ದ ದಿನದಂದು ಜನಿಸಿದ ನೆನಪಿಗಾಗಿ ಕಪಿಲ್ಗೆ ಈ ಹೆಸರನ್ನು ಮೃಗಾಲಯದ ಅಧಿಕಾರಿಗಳು ಇಟ್ಟಿದ್ದರು.ಕಪಿಲ್ ದೇವ್ ನನ್ನು ಪ್ರಾಣಿ ವಿನಿಮಯ ಯೋಜನೆಯಡಿ ಬರೋಡಾದ ಮೃಗಾಲಯಕ್ಕೆ ನೀಡಲಾಗಿತ್ತು. ಹಲವು ವರ್ಷ ಅಲ್ಲಿಯೇ ಇದ್ದು 2011ರಲ್ಲಿ ಆತ ತೀರಿಕೊಂಡಿದ್ದ ಎಂದು ಮೈಸೂರು ಮೃಗಾಲಯ ಸಿಬ್ಬಂದಿ ನೆನಪಿಸಿಕೊಳ್ಳುತ್ತಾರೆ.ಹಿರಿಯಜ್ಜಿ ಗಂಗಮ್ಮಕೂದಲೇ ಇಲ್ಲದೇ ಆಕರ್ಷಣೆಯಾಗಿದ್ದ ಗುರು ಎನ್ನುವ ಚಿಂಪಾಂಜಿ ಕೂಡ ಏಳು ವರ್ಷದ ಹಿಂದೆ ಮೃತಪಟ್ಟರೆ, ಏಷ್ಯಾದ ಅತೀ ಹಿರಿಯ ಚಿಂಪಾಂಜಿ ಎನ್ನುವ ಹೆಸರಾದ ಗಂಗಾ ಸಹಿತ ಆರು ಚಿಂಪಾಂಜಿಗಳು ಈಗ ಮೈಸೂರು ಮೃಗಾಲಯದಲ್ಲಿವೆ. ಇದರಲ್ಲಿ ತಲಾ ಮೂರು ಗಂಡು ಹಾಗೂ ಹೆಣ್ಣು.ಮೈಸೂರು ಮೃಗಾಲಯದಲ್ಲಿ ಗಂಗಾ ಎನ್ನುವ 65 ವರ್ಷದ ಚಿಂಪಾಂಜಿ ಈಗಲೂ ಆರೋಗ್ಯವಾಗಿದೆ. ಸಾಮಾನ್ಯವಾಗಿ ಚಿಂಪಾಂಜಿ ಬದುಕುವುದೇ ಹೆಚ್ಚು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಹಿರಿಯ ಸದಸ್ಯರಂತೆ ಬದುಕುತ್ತಿದೆ. ಚಿಂಪಾಂಜಿ ದಿನದ ಕಾರಣಕ್ಕೆ ಇಂದು( ಜುಲೈ 14) ವಿಶೇಷ ಆಹಾರವನ್ನು ಅವುಗಳಿಗೆ ನೀಡಲಾಗಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ಹೇಳುತ್ತಾರೆ.ಬಿಬಿಪಿಯಲ್ಲೂ ಸಿದ್ದತೆಮೈಸೂರು ನಂತರ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವೂ ಚಿಂಪಾಂಜಿ ಪ್ರದರ್ಶನಕ್ಕೆ ಅಣಿಯಾಗುತ್ತಿದೆ. ಮೂರು ಚಿಂಪಾಂಜಿಗಳನ್ನು ಸಿಂಗಾಪುರ ಮೃಗಾಲಯದಿಂದ ಬನ್ನೇರುಘಟ್ಟಕ್ಕೆ ತರಲು ಅನುಮತಿ ದೊರೆತಿದ್ದು, ಪ್ರಕ್ರಿಯೆ ಶುರುವಾಗಿದೆ. ಈ ವರ್ಷದೊಳಗೆ ಚಿಂಪಾಂಜಿ ಲಭ್ಯವಾಗುವ ನಿರೀಕ್ಷೆಯಿದೆ.ಮೂಲ ಎಲ್ಲಿಚಿಂಪಾಂಜಿಗಳು ಈಗಲೂ ನೆಲೆ ಕಂಡುಕೊಂಡಿರುವುದು ಆಫ್ರಿಕಾದ ಕಾಡಿನಲ್ಲಿ. ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳು ಮತ್ತು ಸವನ್ನಾಗಳಲ್ಲಿವೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಇವುಗಳ ಅತಿ ದೊಡ್ಡ ನೆಲೆಯಾಗಿ ಹೆಸರುವಾಸಿ. ಕಾಡಿನಲ್ಲಿ, ಚಿಂಪಾಂಜಿಗಳು ಕೇವಲ 35 ರಿಂದ 40 ವರ್ಷಗಳ ಕಾಲ ಬದುಕುತ್ತವೆ. ಆದರೆ, ಮೃಗಾಲಯದಲ್ಲಿ ಈ ಪ್ರಮಾಣ 50 ವರ್ಷವನ್ನೂ ದಾಟುತ್ತದೆ. ಅದಕ್ಕೆ ಕಾರಣ ಸುರಕ್ಷತೆ ಹಾಗೂ ನಿಯಮಿತ ಆಹಾರ ಲಭ್ಯತೆ.ಚಿಂಪಾಂಜಿ ಎಂದರೆ ಕಣ್ಣ ಮುಂದೆ ನಿಲ್ಲುವುದು ವಿಶಿಷ್ಟ ಹಾವಭಾವ, ನೋಟದ ಈ ಪ್ರಾಣಿ. ಮಾತನಾಡಲು ಬಾರದೇ ಇರುವುದನ್ನು ಬಿಟ್ಟರೆ ಚಿಂಪಾಂಜಿಗಳು ಮನುಷ್ಯರಂತೆಯೇ ಕುಟುಂಬ ಜೀವಿಗಳು. ಭಾವನೆಯನ್ನು ವ್ಯಕ್ತಪಡಿಸುತ್ತಲೇ ಪ್ರೀತಿಯಿಂದಲೇ ಬದುಕಬಲ್ಲ ಜೀವಿಗಳು. ಮನುಷ್ಯನ ಹಲವು ರೀತಿಯ ನಡವಳಿಕೆಗಳನ್ನು ಪ್ರದರ್ಶಿಸುತ್ತವೆ. ಅವುಗಳ ಬದುಕಿನ ಕ್ರಮ, ಮನುಷ್ಯನ ಜೀವನ ಹಾದಿಯ ಕುರಿತು ಹಲವಾರು ಸಂಶೋಧನೆಗಳೂ ಆಗಿವೆ.ಬಹುತೇಕ ಎಲ್ಲಾ ಪ್ರಾಣಿಗಳಿಗೂ ಒಂದು ದಿನ ಇರುವಂತೆ ಚಿಂಪಾಂಜಿಗಳಿಗೂ ದಿನವಿದೆ. ಅದು ಜುಲೈ 14. ಈ ದಿನವನ್ನು 66 ವರ್ಷದಿಂದಲೂ ಚಿಂಪಾಂಜಿ ದಿನವಾಗಿ ಆಚರಿಸುವ ಪರಿಪಾಠ ಬೆಳೆದು ಬಂದಿದೆ. ವನ್ಯಜೀವಿ ಸಂಶೋಧಕಿ ಡಾ. ಜೇನ್ ಗುಡಾಲ್ ಅವರು ಮೊದಲ ಬಾರಿಗೆ ತಾಂಜಾನಿಯಾದ ‘ಗೊಂಬೆ ಸ್ಟ್ರೀಮ್ ರಾಷ್ಟ್ರೀಯ ಉದ್ಯಾನವನ’ದಲ್ಲಿ ಸಂಶೋಧನೆ ಆರಂಭಿಸಿದರು. ಚಿಂಪಾಂಜಿಗಳು ಆಹಾರ ಹುಡುಕುವ ಕ್ರಮ, ಬಳಕೆ, ಸಾಮಾಜಿಕ ಜೀವನದ ಕುರಿತು ಹಲವು ಅಂಶಗಳನ್ನು ಗುಡಾಲ್ ಹೊರ ಹಾಕಿದ್ದು ಗಮನ ಸೆಳೆಯಿತು. ಇದರ ನೆನಪಿಗಾಗಿ ಜುಲೈ 14ರಂದು ಚಿಂಪಾಂಜಿ ದಿನ ಘೋಷಿಸಲಾಯಿತು. ಅಳಿವಂಚಿನ ಪ್ರಾಣಿಗಳ ಪಟ್ಟಿಯಲ್ಲಿರುವ ಚಿಂಪಾಂಜಿಗಳ ಬೇಟೆ ಆಫ್ರಿಕಾದ ಅರಣ್ಯದಲ್ಲಿ ಅವ್ಯಾಹತವಾಗಿ ನಡೆದಿದೆ. ಈ ದಿನ ಚಿಂಪಾಂಜಿಗಳ ಜೀವನ ಕ್ರಮ, ಮಹತ್ವ, ಬೇಟೆ ತಗ್ಗಿಸುವ ಜಾಗೃತಿಯನ್ನು ನಿರಂತರವಾಗಿ ಮೂಡಿಸಿಕೊಂಡು ಬರಲಾಗುತ್ತಿದೆ. ಜೇನ್ ಗುಡಾಲ್ ನಿಧನರಾದ ನಂತರ ಇದು ಮೊದಲ ವಿಶ್ವ ಚಿಂಪಾಂಜಿ ದಿನ. ಕಳೆದ ಅಕ್ಟೋಬರ್ನಲ್ಲಿ ಗುಡಾಲ್ ನಿಧನರಾಗಿದ್ದರು.ಚಿಂಪಾಂಜಿ ದಿನ ಏಕೆಪಿ.ಅನುಷಾ, ಕಾರ್ಯನಿರ್ವಾಹಕ ನಿರ್ದೇಶಕಿ, ಮೈಸೂರು ಮೃಗಾಲಯಮೈಸೂರು ಮೃಗಾಲಯವಂತೂ ನಿರಂತರವಾಗಿ ಚಿಂಪಾಂಜಿ ಪ್ರದರ್ಶನ ಮಾಡುತ್ತಾ ಬಂದಿದೆ. ಈಗ ಗಂಗಾ ಎನ್ನುವ ಚಿಂಪಾಂಜಿ 65 ವರ್ಷ ಬದುಕಿ ಈಗಲೂ ಚೆನ್ನಾಗಿದ್ದು, ಹಿರಿಯ ವಯಸ್ಸಿನದ್ದು ಎನ್ನುವ ಹಿರಿಮೆ ಪಡೆದಿದೆ.ಬುದ್ಧಿವಂತಿಕೆ ಮತ್ತು ಕುತೂಹಲದ ಪ್ರತೀಕವಾದ ಚಿಂಪಾಂಜಿಗಳಿಗೆ ಇಂದು ವಿಶೇಷ ದಿನ.July 14th World Chimpanzee DayLet’s celebrate these remarkable primates and the incredible bond we share with nature.Come visit the chimpanzees at Mysuru Zoo and experience their fascinating world. pic.twitter.com/YI5VLJa6Ek— Mysuru Zoo (@Mysore_Zoo) July 14, 2026