ಸಂಭ್ರಮದ ಈದ್: ಖರ್ಗೆ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್, ಬಿಜೆಪಿ ಆಕ್ಷೇಪ
ನವದೆಹಲಿ (ಪಿಟಿಐ): ದೀಪಾವಳಿ ಹಬ್ಬವನ್ನು ‘ಸಂಭ್ರಮದ ಈದ್’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಣ್ಣಿಸಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಖರ್ಗೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ‘ದೀಪಾವಳಿಯು ಭಾರತದಲ್ಲಿ ಪ್ರತಿಯೊಬ್ಬರೂ ಆಚರಿಸುವ ಪ

ನವದೆಹಲಿ (ಪಿಟಿಐ): ದೀಪಾವಳಿ ಹಬ್ಬವನ್ನು ‘ಸಂಭ್ರಮದ ಈದ್’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಣ್ಣಿಸಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಖರ್ಗೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ‘ದೀಪಾವಳಿಯು ಭಾರತದಲ್ಲಿ ಪ್ರತಿಯೊಬ್ಬರೂ ಆಚರಿಸುವ ಪ್ರಮುಖ ಹಬ್ಬ. ಇದು ‘ಖುಷಿಯೋಂ ಕಾ ಈದ್’ (ಸಂಭ್ರಮದ ಈದ್) ಎಂದು ದೇಶದ ಜನರಿಗೆ ಹಬ್ಬದ ಶುಭಾಶಯ ಕೋರಿದ್ದರು.ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ‘ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ಸೋಮವಾರ ಆರೋಪಿಸಿದೆ.‘ಮುಸ್ಲಿಂ ಸಮುದಾಯವನ್ನು ಓಲೈಸುವ ಪ್ರಯತ್ನದಲ್ಲಿ ಹಿಂದೂ ಧಾರ್ಮಿಕ ಸಂಪ್ರದಾಯವನ್ನು ಅಗೌರವಿಸುವುದನ್ನೇ ಕಾಂಗ್ರೆಸ್ ಅಭ್ಯಾಸವನ್ನಾಗಿ ಮಾಡಿಕೊಂಡಿದೆ’ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ.‘ಇದು ಕಾಂಗ್ರೆಸ್ನ ಡಿಎನ್ಎ. ಮುಸ್ಲಿಮರ ಬಹಿರಂಗ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್, ಸಂತೋಷ, ಹರ್ಷ ಮತ್ತು ಒಳಗೊಳ್ಳುವಿಕೆಯ ಸಂಕೇತವಾಗಿರುವ ಹಬ್ಬದ ಸಂದರ್ಭದಲ್ಲೂ ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವುದು ಅದರ ಗುಣವಾಗಿದೆ’ ಎಂದು ದೂರಿದ್ದಾರೆ.‘ಖರ್ಗೆ ಅವರು ದೀಪಾವಳಿಯ ಶುಭಾಶಯ ಕೋರಲು ಸಹ ಹಿಂಜರಿಯುತ್ತಿದ್ದಾರೆ. ಅವರ ಹೇಳಿಕೆಯು ಕಾಂಗ್ರೆಸ್ನ ಹಿಂದೂ ಮತ್ತು ಸನಾತನ ವಿರೋಧಿ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಆರೋಪಿಸಿದ್ದಾರೆ.‘ಖರ್ಗೆ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಗಳು ಇವರದೇ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತವೆ’ ಎಂದು ಹೇಳಿದ್ದಾರೆ.ಗೌರವ್ ಭಾಟಿಯಾಗೌರವ್ ಭಾಟಿಯಾ, ಬಿಜೆಪಿ ವಕ್ತಾರರಾಹುಲ್ ಗಾಂಧಿ ಖರ್ಗೆ ಅವರೇ ಇದಕ್ಕೆ ಉತ್ತರಿಸಿ. ನೀವು ಎಂದಾದರೂ ಈದ್ ಹಬ್ಬವನ್ನು ‘ಸಂಭ್ರಮದ ದೀಪಾವಳಿ’ ಎಂದು ಕರೆಯುವ ಧೈರ್ಯವನ್ನು ತೋರುತ್ತೀರಾ?ತುಹಿನ್ ಸಿನ್ಹಾ, ಬಿಜೆಪಿ ವಕ್ತಾರಮುಸ್ಲಿಮರು ವರ್ಷಕ್ಕೆ ಎರಡು ಬಾರಿ ಮಾತ್ರ ಈದ್ ಆಚರಿಸುತ್ತಾರೆ. ಆದರೆ ಕಾಂಗ್ರೆಸ್ ಪಕ್ಷವು ಪ್ರತಿಯೊಂದು ಹಿಂದೂ ಹಬ್ಬವನ್ನು ‘ಸಂತೋಷದ ಈದ್’ ಆಗಿ ಆಚರಿಸಲು ಬಯಸುತ್ತದೆಪ್ರದೀಪ್ ಭಂಡಾರಿ, ಬಿಜೆಪಿ ವಕ್ತಾರಕಾಂಗ್ರೆಸ್ ಪಕ್ಷವು ದೀಪಾವಳಿಯಂತಹ ಸಂದರ್ಭಗಳಲ್ಲೂ ತುಷ್ಟೀಕರಣ ವೋಟ್ ಬ್ಯಾಂಕ್ ರಾಜಕಾರಣದ ಬಗ್ಗೆ ಯೋಚಿಸುತ್ತದೆ. ಇದು ಸನಾತನ ವಿರೋಧಿ ಮನಃಸ್ಥಿತಿಯನ್ನು ತೋರಿಸುತ್ತದೆ ‘ಹಿಂದೂ ಭಯೋತ್ಪಾದನೆ: ಸೋನಿಯಾ ಆಲೋಚನೆಯ ಉತ್ಪನ್ನ’ ‘ಹಿಂದೂ ಭಯೋತ್ಪಾದನೆ ಎಂಬ ಪರಿಕಲ್ಪನೆಯು ಸೋನಿಯಾ ಗಾಂಧಿ ಅವರ ಆಲೋಚನೆಯ ಉತ್ಪನ್ನವಾಗಿದೆ’ ಎಂದು ಗೌರವ್ ಭಾಟಿಯಾ ಆರೋಪಿಸಿದ್ದಾರೆ. ‘ಕಾಂಗ್ರೆಸ್ ದೀಪಾವಳಿಯ ಸಂದರ್ಭದಲ್ಲಿ ಮಾತ್ರ ಪರಿಸರ ಮಾಲಿನ್ಯದ ಬಗ್ಗೆ ಕಾಳಜಿ ತೋರಿಸುತ್ತದೆ. ಆದರೆ ಇತರ ಸಂದರ್ಭಗಳಲ್ಲಿ ಮೌನವಾಗಿರುತ್ತದೆ’ ಎಂದು ದೂರಿದ್ದಾರೆ. ಬಕ್ರೀದ್ ಹಬ್ಬವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು ‘ನಮ್ಮ ಮುಸ್ಲಿಂ ಸಹೋದರ– ಸಹೋದರಿಯರು ಬಕ್ರೀದ್ ಆಚರಿಸುವಾಗ ಮೇಕೆಗಳನ್ನು ಬಲಿ ನೀಡಲಾಗುತ್ತದೆ. ರಕ್ತವು ನೀರಿನಲ್ಲಿ ಹರಿದು ಜಲಮಾಲಿನ್ಯ ಉಂಟಾಗುತ್ತದೆ. ಆದರೆ ಒಂದೇ ಒಂದು ಬಾರಿಯೂ ಯಾವುದೇ ಕಾಂಗ್ರೆಸ್ ನಾಯಕರು ಈ ಬಗ್ಗೆ ಮಾತನಾಡಿಲ್ಲ’ ಎಂದಿದ್ದಾರೆ. ‘ಇದೇ ಪಕ್ಷ ಒಮ್ಮೆ ಶ್ರೀರಾಮನು ಕಾಲ್ಪನಿಕ ಎಂದು ವಾದಿಸಿತ್ತು. ಇಂತಹ ಪಕ್ಷಕ್ಕೆ ನಮ್ಮ ಭವ್ಯವಾದ ಧಾರ್ಮಿಕ ಹಬ್ಬಗಳ ಬಗ್ಗೆ ಪ್ರತಿಕ್ರಿಯಿಸುವ ಯಾವುದೇ ಹಕ್ಕಿಲ್ಲ. ಸೋನಿಯಾ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ಇದುವರೆಗೆ ರಾಮಮಂದಿರಕ್ಕೆ ಭೇಟಿ ನೀಡಿಲ್ಲ’ ಎಂದು ಹೇಳಿದ್ದಾರೆ.ಪವನ್ ಖೇರಾಟೀಕಾಕಾರರು ಅಜ್ಞಾನಿಗಳು: ಕಾಂಗ್ರೆಸ್ ವಾಗ್ದಾಳಿ ‘ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಟೀಕಿಸುತ್ತಿರುವವರು ಭಾಷಾಜ್ಞಾನ ಅಥವಾ ಪದಗಳ ಅರ್ಥದ ಅರಿವಿಲ್ಲದವರು’ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ವಾಗ್ದಾಳಿ ನಡೆಸಿದ್ದಾರೆ. ಟೀಕಾಕಾರರನ್ನು ‘ಅಜ್ಞಾನಿಗಳು’ ಎಂದು ಜರಿದಿರುವ ಅವರು ‘ಈದ್ ಎಂದರೆ ಹಬ್ಬ ಎಂಬ ಸರಳ ಅರ್ಥವಿದೆ. ಖರ್ಗೆ ಅವರ ಹೇಳಿಕೆಯನ್ನು ಇನ್ನೊಮ್ಮೆ ಗಮನಿಸಿ. ಅದರಲ್ಲಿ ಯಾವುದೇ ತಪ್ಪಿಲ್ಲ ಅದು ತೀರಾ ಸಾಮಾನ್ಯವಾಗಿದೆ. ಆದರೆ ‘ಸಂಘಿ’ಗಳಲ್ಲಿರುವ ನಕಾರಾತ್ಮಕ ಭಾವನೆಯಿಂದಾಗಿ ಅವರಿಗೆ ಸಾಮಾನ್ಯ ಹಬ್ಬದ ಹೆಸರನ್ನು ಕೂಡ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಾಗೂ ದೇವರ ಮೇಲಿನ ಪ್ರೀತಿಗಾಗಿ ದಯವಿಟ್ಟು ನಿಮ್ಮ ಮಿದುಳಿನಲ್ಲಿ ಸ್ವಲ್ಪ ಜ್ಞಾನದ ದೀಪಗಳನ್ನು ಬೆಳಗಿಸಿಕೊಳ್ಳಿ. ನಿಮ್ಮ ಮೂರ್ಖತನವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಉಳಿದ ನಮಗೆಲ್ಲ ಮುಜುಗರ ಉಂಟುಮಾಡುವುದನ್ನು ನಿಲ್ಲಿಸಿ’ ಎಂದು ಸಲಹೆ ನೀಡಿದ್ದಾರೆ.
