ನ.13ಕ್ಕೆ ಒಟಿಟಿಗೆ ಬರುತ್ತಿದೆ ವಿಜಯ್- ರಶ್ಮಿಕಾ ನಟನೆಯ 'ರಣಬಾಲಿ'
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟನೆಯ 'ರಣಬಾಲಿ' ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.ಇದೆ 13 ರಂದು ನೆಟ್ಫ್ಲಿಕ್ಸ್ನಲ್ಲಿ ರಣಬಾಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ತೆಲುಗಿನ ಈ ಸಿನಿಮಾ ಅ.16ರಂದು ವಿಶ್ವದಾದ್ಯಂತ ತೆರೆಕಂಡಿತ್ತು. ಒಟ್ಟಾರೆ ₹80 -81 ಕೋಟಿ ಗಳಿಸಿದ್ದ ಸಿನಿಮಾ, ಈಗ ನೆಟ್ಫ್ಲಿಕ್ಸ್ನಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟನೆಯ 'ರಣಬಾಲಿ' ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.ಇದೆ 13 ರಂದು ನೆಟ್ಫ್ಲಿಕ್ಸ್ನಲ್ಲಿ ರಣಬಾಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ತೆಲುಗಿನ ಈ ಸಿನಿಮಾ ಅ.16ರಂದು ವಿಶ್ವದಾದ್ಯಂತ ತೆರೆಕಂಡಿತ್ತು. ಒಟ್ಟಾರೆ ₹80 -81 ಕೋಟಿ ಗಳಿಸಿದ್ದ ಸಿನಿಮಾ, ಈಗ ನೆಟ್ಫ್ಲಿಕ್ಸ್ನಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಸಿಗಲಿದೆ.Singanamala Bobbili Ranabaali osthunnadu pic.twitter.com/lNBMTC1aYI— Netflix India South (@Netflix_INSouth) November 9, 2026 ‘ರಣಬಾಲಿ’ 1854ರಿಂದ 1878ರ ಅವಧಿಯ ಘಟನೆಗಳನ್ನು ಆಧರಿಸಿದ ಚಿತ್ರ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಡಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ನಿರ್ಮಿಸಿದ್ದಾರೆ. ಅನುರಾಗ್ ಪರ್ವತನೇನಿ ಹಾಗೂ ಶಿವ್ ಚನನ್ ಸಹ-ನಿರ್ಮಾಪಕರಾಗಿದ್ದಾರೆ. ಹಾಲಿವುಡ್ ನಟ ಅರ್ನೋಲ್ಡ್ ವೊಸ್ಲೊ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ರಾಹುಲ್ ಸಂಕ್ರಿತ್ಯನ್ ನಿರ್ದೇಶನದ ಚಿತ್ರಕ್ಕೆ ಅಜಯ್–ಅತುಲ್ ಜೋಡಿ ಸಂಗೀತ ಸಂಯೋಜಿಸಿದೆ. ರಣಬಾಲಿ ಮೂಲಕ ತೆಲುಗಿಗೆ ಕಾಲಿಟ್ಟ ವೈಜನಾಥ್ ಬಿರಾದರ್: ಶಿಲ್ಪಿ ರಾಮಯ್ಯನಾಗಿ ಮಿಂಚುFilm Teaser: ವಿಜಯ್–ರಶ್ಮಿಕಾ ‘ರಣಬಾಲಿ’ ಟೀಸರ್ ಬಿಡುಗಡೆ‘ರಣಬಾಲಿ’ ಟಿಕೆಟ್ ದರದಲ್ಲಿ ಏರಿಕೆ ಇಲ್ಲ: ಭರವಸೆ ಕೊಟ್ಟ ವಿಜಯ್ ದೇವರಕೊಂಡರಶ್ಮಿಕಾ –ವಿಜಯ್ ನಟನೆಯ ‘ರಣಬಾಲಿ’ ಮೊದಲ ದಿನ ವಿಶ್ವದಾದ್ಯಂತ ಗಳಿಸಿದ್ದೆಷ್ಟು?
