ಸೆನೆಗಲ್: ವಲಸಿಗರಿದ್ದ ದೋಣಿ ಮುಳುಗಿ 30ಕ್ಕೂ ಅಧಿಕ ಮಂದಿ ಸಾವು
ಡಾಕರ್ (ಸೆನೆಗಲ್): ಪಶ್ಚಿಮ ಆಫ್ರಿಕಾದ ಸೆನೆಗಲ್ ಕರಾವಳಿಯಲ್ಲಿ ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮುಳುಗಿದ್ದು, 30ಕ್ಕೂ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸೆನೆಗಲ್ ರಾಜಧಾನಿ ಡಾಕರ್ನಿಂದ 180 ಕಿಲೋಮೀಟರ್ ದೂರದಲ್ಲಿರುವ ಕಬೆಮೆರ್ ಕರಾವಳಿಯ ಬಳಿ ಈ ದುರಂತ ಸಂಭವಿಸಿದೆ. ಉತ್ತರ ಸೆನೆಗಲ್ನ ಸೇಂಟ್ ಲೂಯಿಸ್ನಿಂದ ಸ್ಪ್ಯಾನಿಷ್ ಕರಾವಳಿಯತ್ತ

ಡಾಕರ್ (ಸೆನೆಗಲ್): ಪಶ್ಚಿಮ ಆಫ್ರಿಕಾದ ಸೆನೆಗಲ್ ಕರಾವಳಿಯಲ್ಲಿ ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮುಳುಗಿದ್ದು, 30ಕ್ಕೂ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಸೆನೆಗಲ್ ರಾಜಧಾನಿ ಡಾಕರ್ನಿಂದ 180 ಕಿಲೋಮೀಟರ್ ದೂರದಲ್ಲಿರುವ ಕಬೆಮೆರ್ ಕರಾವಳಿಯ ಬಳಿ ಈ ದುರಂತ ಸಂಭವಿಸಿದೆ. ಉತ್ತರ ಸೆನೆಗಲ್ನ ಸೇಂಟ್ ಲೂಯಿಸ್ನಿಂದ ಸ್ಪ್ಯಾನಿಷ್ ಕರಾವಳಿಯತ್ತ ದೋಣಿ ಸಾಗುತ್ತಿತ್ತು ಎನ್ನಲಾಗಿದೆ.ಭಾನುವಾರ 21 ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿದ್ದವು. ಶೋಧ ಕಾರ್ಯಾಚರಣೆ ಮುಂದುವರಿದಿತ್ತು. ಈವರೆಗೆ ಒಬ್ಬ ಪ್ರಯಾಣಿಕರನ್ನು ಮಾತ್ರವೇ ಜೀವಂತವಾಗಿ ರಕ್ಷಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಯಲ್ಲಿ ಎಷ್ಟು ಮಂದಿ ಇದ್ದರು ಮತ್ತು ಇನ್ನೂ ಕಾಣೆಯಾದವರ ಸಂಖ್ಯೆ ಬಗ್ಗೆ ನಿಖರ ಮಾಹಿತಿ ಇಲ್ಲ.
Read the complete story at Prajavani