ಬಿ.ಎಂ. ಶ್ರೀಕಂಠಯ್ಯ ರಸ್ತೆ: ಬಸವನಗುಡಿ, ಹನುಮಂತನಗರದ ಪ್ರಮುಖ ಹೆಗ್ಗುರುತು
ನಾವು ಈಗ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹನೀಯರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ. ಆ ಸಾಲಿನಲ್ಲಿ ಬರುವ ಪ್ತಮುಖರೆಂದರೆ, ಬಿ. ಎಂ. ಶ್ರೀಕಂಠಯ್ಯ. ಕನ್ನಡ ಸಾಹಿತ್ಯ ಲೋಕದ ಪಿತಾಮಹರೆಂದೇ ಪ್ರಸಿದ್ಧರಾದ ‘ಬಿ.ಎಂ.ಶ್ರೀ’ ಅವರ ಹೆಸರನ್ನು ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಇಡಲಾಗಿದೆ

ನಾವು ಈಗ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹನೀಯರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ. ಆ ಸಾಲಿನಲ್ಲಿ ಬರುವ ಪ್ತಮುಖರೆಂದರೆ, ಬಿ. ಎಂ. ಶ್ರೀಕಂಠಯ್ಯ. ಕನ್ನಡ ಸಾಹಿತ್ಯ ಲೋಕದ ಪಿತಾಮಹರೆಂದೇ ಪ್ರಸಿದ್ಧರಾದ ‘ಬಿ.ಎಂ.ಶ್ರೀ’ ಅವರ ಹೆಸರನ್ನು ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಇಡಲಾಗಿದೆ.ಬಿ. ಎಂ. ಶ್ರೀಕಂಠಯ್ಯ ರಸ್ತೆ ನಗರದ ಪ್ರಮುಖ ಮತ್ತು ಹಳೆಯ ರಸ್ತೆಗಳಲ್ಲಿ ಒಂದಾಗಿದೆ. ಈ ರಸ್ತೆಯು ಬೆಂಗಳೂರಿನ ಹೃದಯಭಾಗದಲ್ಲಿರುವ ಹನುಮಂತನಗರ ಮತ್ತು ಬಸವನಗುಡಿ ನಡುವಿನ ಮುಖ್ಯ ರಸ್ತೆಯಾಗಿದೆ.ಇದು ಕೆಂಪೇಗೌಡ ನಗರ, ಎನ್. ಆರ್. ಕಾಲೋನಿ, ಗಿರಿನಗರ, ಶ್ರೀನಿವಾಸನಗರ, ವಿದ್ಯಾಪೀಠ ಸರ್ಕಲ್ ಸೇರಿದಂತೆ ಮುಂತಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ.ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಬಿ.ಎಂ.ಶ್ರೀಕಂಠಯ್ಯ ರಸ್ತೆಯು ಹನುಮಂತನಗರದ ಪ್ರಸಿದ್ಧ ಬೆಟ್ಟದ ಮೇಲಿರುವ ರಾಮಾಂಜನೇಯ ಸ್ವಾಮಿ (ಗುಡ್ಡದ ಆಂಜನೇಯ ಸ್ವಾಮಿ) ದೇವಸ್ಥಾನದ ಸಮೀಪದಲ್ಲಿದೆ.ದೊಡ್ಡ ಗಣಪತಿ ದೇವಸ್ಥಾನ, ರಾಮಕೃಷ್ಣ ಆಶ್ರಮ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ, ಉತ್ತರಾದಿ ಮಠ, ಶೃಂಗೇರಿ ಶಂಕರಮಠ, ಪೂರ್ಣಪ್ರಜ್ಞ ವಿದ್ಯಾಪೀಠ, ಮಾಗಡಿ ಕಾರಣಿಕರ ಪಾಠಶಾಲೆ, ಶ್ರೀ ವ್ಯಾಸರಾಜ ಮಠ ಸೋಸಲೆ, ರಾಘವೇಂದ್ರ ಸ್ವಾಮಿ ಬೃಂದಾವನ, ಪುತ್ತಿಗೆ ಮಠ, ರೇಣುಕಾಂಬ ದೇವಸ್ಥಾನ, ಎಂ.ಎನ್.ಕೃಷ್ಣರಾವ್ ಪಾರ್ಕ್, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಜಯತೀರ್ಥ ಬೃಂದಾವನ ಸಂಸ್ಥೆಗೆ ಬಿ.ಎಂ.ಶ್ರೀಕಂಠಯ್ಯ ರಸ್ತೆಯು ಸಂಪರ್ಕ ಕಲ್ಪಿಸುತ್ತದೆ.ಬಸವನಗುಡಿ ಹಾಗೂ ಹನುಮಂತನಗರ ಪ್ರದೇಶಗಳು ಹಳೆಯ ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತವೆ. ಈ ರಸ್ತೆಯು ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ.ವ್ಯಾಪಾರ ವಹಿವಾಟು...ವ್ಯಾಪಾರ ಮಳಿಗೆಗಳು: ರಸ್ತೆಯ ಎರಡೂ ಬದಿಗಳಲ್ಲಿ ದಿನಸಿ ಅಂಗಡಿಗಳು, ಬೇಕರಿಗಳು, ಬಟ್ಟೆ ಮಳಿಗೆಗಳು ಹಾಗೂ ಹೂವು-ಹಣ್ಣು ಮಾರಾಟಗಾರರು ಕಾಣಸಿಗುತ್ತಾರೆ.ಸ್ಥಳೀಯ ನಿವಾಸಿಗಳಿಗೆ ದೈನಂದಿನ ಅಗತ್ಯ ವಸ್ತುಗಳನ್ನು ಪೂರೈಸುವ ಮಾರುಕಟ್ಟೆ ಚಟುವಟಿಕೆಗಳಿಗೆ ಈ ರಸ್ತೆ ಪ್ರಸಿದ್ಧ.ಸಾರಿಗೆ ಸೌಲಭ್ಯಬಿಎಂಟಿಸಿ ಬಸ್ ಸೌಲಭ್ಯ: ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಮತ್ತು ಕೆ. ಆರ್. ಮಾರುಕಟ್ಟೆಯಿಂದ ಹನುಮಂತನಗರ ಹಾಗೂ ಶ್ರೀನಗರಕ್ಕೆ ಸಂಪರ್ಕಿಸುವ ಪ್ರಮುಖ ಬಿಎಂಟಿಸಿ ಬಸ್ಗಳು ಈ ರಸ್ತೆಯ ಮೂಲಕ ಹಾದುಹೋಗುತ್ತವೆ.ಮೆಟ್ರೊ ನಿಲ್ದಾಣ: ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿರುವ ‘ನ್ಯಾಷನಲ್ ಕಾಲೇಜು’ ಅಥವಾ ‘ಲಾಲ್ಬಾಗ್’ ಮೆಟ್ರೊ ನಿಲ್ದಾಣಗಳು ಈ ರಸ್ತೆಗೆ ಸಮೀಪದಲ್ಲಿವೆ.ಶಿಕ್ಷಣ ಮತ್ತು ವಸತಿಬಿ.ಎಂ.ಶ್ರೀ ರಸ್ತೆಯ ಸುತ್ತಮುತ್ತ ಪ್ರಸಿದ್ಧ ಬಿ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯ, ಬಿ.ಎಂ.ಎಸ್ ಮಹಿಳೆಯರ ಕಾಲೇಜು, ನ್ಯಾಷನಲ್ ಕಾಲೇಜು, ಬೆಂಗಳೂರು ಹೈಯರ್ ಸೆಕೆಂಡರಿ ಸ್ಕೂಲ್, ವಿ.ಇ.ಟಿ ಶಾಲೆ, ಬಿ.ಎಂ.ಎಸ್ ತಾಂತ್ರಿಕ ಮಹಾವಿದ್ಯಾಲಯ, ಆಚಾರ್ಯ ಪಾಠಶಾಲೆ, ಬೆಂಗಳೂರು ತಾಂತ್ರಿಕ ವಿದ್ಯಾಲಯ (ಬಿ.ಐ.ಟಿ), ವಿಜಯ ಕಾಲೇಜು, ವಿ.ವಿ. ಪುರಂ ಕಾಲೇಜು, ವಾಸವಿ ವಿದ್ಯಾ ನಿಕೇತನ, ಸುರಾನ ಕಾಲೇಜು, ದಿ ಹೋಮ್ ಸ್ಕೂಲ್, ಬಿ.ಬಿ.ಯು.ಎಲ್. ಜೈನ್ ವಿದ್ಯಾಲಯ, ಆತ್ಮಶ್ರೀ ವಿದ್ಯಾ ಸ೦ಸ್ಥೆ, ಮೂಕಾ೦ಬಿಕಾ ವಿದ್ಯಾ ಸಂಸ್ಥೆ, ಶ್ರೀ ಲಲಿತಾ ವಿದ್ಯಾ ಮಂದಿರ (ತ್ಯಾಗರಾಜ ನಗರ) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸೇರಿದಂತೆ ಪ್ರಮುಖ ವಿದ್ಯಾಸಂಸ್ಥೆಗಳಿವೆ. ಇದು ಶಾಂತಿಯುತವಾದ ಮತ್ತು ಹಳೆಯ ಬೆಂಗಳೂರಿನ ಶೈಲಿಯ ವಸತಿ ಬಡಾವಣೆಗಳಿಂದ ಕೂಡಿರುವ ಪ್ರದೇಶವಾಗಿದೆ. ‘ಬ್ಯೂಗಲ್ ರಾಕ್’ ದಕ್ಷಿಣದ ಬೆಂಗಳೂರಿನ ಎತ್ತರ ಪ್ರದೇಶದಲ್ಲಿರುವ ಬಸವನಗುಡಿ ಹಲವು ಐತಿಹ್ಯಗಳ ತಾಣ. ನಗರದ ನಿರ್ಮಾತೃ ಕೆಂಪೇಗೌಡರು ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ಕಾವಲು ಗೋಪುರಗಳಲ್ಲಿ ಒಂದಾದ ‘ಕಹಳೆ ಬಂಡೆ’ ಇಲ್ಲಿನ ಪ್ರಮುಖ ಆಕರ್ಷಣೆ. ಇದನ್ನು ‘ಬ್ಯೂಗಲ್ ರಾಕ್’ ಎಂದೂ ಕರೆಯುತ್ತಾರೆ.ದೊಡ್ಡ ಬಸವಣ್ಣನ ದೇವಸ್ಥಾನದ (ಬುಲ್ ಟೆಂಪಲ್) ಸನಿಹವೇ ಉಬ್ಬು, ತಗ್ಗು ಬಂಡೆಗಳು ಮನ ಸೆಳೆಯುತ್ತವೆ. ಈ ದಾರಿಯಲ್ಲಿ ಸಾಗಿದರೆ ಮನ ಮುದಗೊಳಿಸುವ ವೈವಿಧ್ಯಮಯ ಮರಗಳ ಹಸಿರು, ಬಾವಲಿ– ಹಕ್ಕಿಗಳ ಚಿಲಿಪಿಲಿಯೂ ಇದೆ. ಇದರ ನಡುವೆ ಕಲ್ಲಿನ ಕಾವಲು ಗೋಪುರ ಆಕರ್ಷಿಸುತ್ತದೆ. ಕಲ್ಲಿನ ಮೆಟ್ಟಿಲುಗಳ ಮೂಲಕ ಗೋಪುರ ಏರಿ ಕೊಂಚ ವಿರಮಿಸಬಹುದು. ಇಲ್ಲಿಂದ ಈ ಪ್ರದೇಶದ ಪಕ್ಷಿನೋಟವನ್ನು ಕಣ್ತುಂಬಿಕೊಳ್ಳಬಹುದು.ಹಸಿರು ಪರಿಸರಈ ರಸ್ತೆಯ ಆಸುಪಾಸಿನಲ್ಲಿ ಹಳೆಯ ಬೆಂಗಳೂರಿನ ಸೊಗಡನ್ನು ಉಳಿಸಿಕೊಂಡಿರುವ ಹಲವು ಉದ್ಯಾನಗಳನ್ನು ನೋಡಬಹುದು. ಬಿ.ಎಂ.ಶ್ರೀ ರಸ್ತೆಯು ಕೇವಲ ಒಂದು ರಸ್ತೆಯಾಗಿ ಉಳಿದಿಲ್ಲ. ಪ್ರತಿದಿನ ಸಾವಿರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳು ಸಂಚರಿಸುವ ಬೆಂಗಳೂರಿನ ಜೀವನಾಡಿಯಾಗಿದೆ. ಹಳೆಯ ಕಾಲದ ವಸತಿ ಸಂಸ್ಕೃತಿ ಮತ್ತು ಆಧುನಿಕ ಮೆಟ್ರೊ ಸಾರಿಗೆಯ ಸಮ್ಮಿಶ್ರಣವನ್ನು ಹೊಂದಿರುವ ಈ ರಸ್ತೆಯು ಬಸವನಗುಡಿ ಮತ್ತು ಹನುಮಂತನಗರದ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ.ಮಹಾಕವಿ ಕುವೆಂಪು ರಸ್ತೆ: ಹಳೆ ಬೆಂಗಳೂರಿನ ನೆನಪು, ಹೊಸ ನಗರದ ಹೆಜ್ಜೆಗುರುತುಕರುನಾಡೋತ್ಸವ | ಡಾ.ಬಿ.ಎಲ್.ವೇಣು ಸರ್ಕಲ್; ಕನ್ನಡಾಭಿಮಾನದ ತಾಣಕರುನಾಡೋತ್ಸವ | ಮೊಮ್ಮಕ್ಕಳ ಮೂಲಕ ಕನ್ನಡಾಭಿಮಾನ ಮೆರೆದ ಛಾಯಾಗ್ರಾಹಕ!ಕರುನಾಡೋತ್ಸವ: ಶಾಲೆಯ ಗೋಡೆಗಳೇ ಕನ್ನಡದ ಪಾಠಶಾಲೆ
