ಗುಡ್ನ್ಯೂಸ್ – ಇಂದಿನಿಂದ ಕ್ಯಾನ್ಸರ್ ಔಷಧಿಗಳ ದರ ಭಾರೀ ಇಳಿಕೆ!
– ದೇಶಾದ್ಯಂತ 137 ಜೀವ ರಕ್ಷಕ ಔಷಧಿಗಳು ಸೇರಿದಂತೆ ಒಟ್ಟು 543 ಔಷಧಿಗಳ ಬೆಲೆ ಇಳಿಕೆ ಬೆಂಗಳೂರು: ಇಂದಿನಿಂದ ಕ್ಯಾನ್ಸರ್ ಔಷಧಿಗಳ (Cancer Medicine) ಬೆಲೆ ಇಳಿಕೆ ಆಗುತ್ತಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಆದೇಶದಂತೆ ದೇಶಾದ್ಯಂತ 137 ಕ್ಯಾನ್ಸರ್ ಜೀವ ರಕ್ಷಕ ಔಷಧಿಗಳು ಸೇರಿದಂತೆ ಒಟ್ಟು 543 ಆಂಟಿ-ಕ್ಯಾನ್ಸರ್ ಔಷಧಿಗಳ ಮತ್ತು ವಿವಿಧ ಬ್ರ್ಯಾಂಡ್ಗಳ

– ದೇಶಾದ್ಯಂತ 137 ಜೀವ ರಕ್ಷಕ ಔಷಧಿಗಳು ಸೇರಿದಂತೆ ಒಟ್ಟು 543 ಔಷಧಿಗಳ ಬೆಲೆ ಇಳಿಕೆ ಬೆಂಗಳೂರು: ಇಂದಿನಿಂದ ಕ್ಯಾನ್ಸರ್ ಔಷಧಿಗಳ (Cancer Medicine) ಬೆಲೆ ಇಳಿಕೆ ಆಗುತ್ತಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಆದೇಶದಂತೆ ದೇಶಾದ್ಯಂತ 137 ಕ್ಯಾನ್ಸರ್ ಜೀವ ರಕ್ಷಕ ಔಷಧಿಗಳು ಸೇರಿದಂತೆ ಒಟ್ಟು 543 ಆಂಟಿ-ಕ್ಯಾನ್ಸರ್ ಔಷಧಿಗಳ ಮತ್ತು ವಿವಿಧ ಬ್ರ್ಯಾಂಡ್ಗಳು ಗರಿಷ್ಠ ಚಿಲ್ಲರೆ ಬೆಲೆ ಕಡಿತಗೊಳ್ಳಲಿದೆ. ಕೆಲವು ಔಷಧಿಗಳ ಬೆಲೆಯಲ್ಲಿ ಶೇ.50ರಿಂದ ಗರಿಷ್ಠ ಶೇ.96.45ರಷ್ಟು ಇಳಿಕೆಯಾಗಲಿದೆ. ಕ್ಯಾನ್ಸರ್ ಔಷಧಿಗಳನ್ನ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ರಾಜ್ಯ ಆರೋಗ್ಯ ಇಲಾಖೆ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆಗೆ ಕೇಂದ್ರಕ್ಕೆ ಪತ್ರ ಕೂಡ ಬರೆದಿದ್ದರು. ಸುಪ್ರೀಂ ಕೋರ್ಟ್ ಕ್ಯಾನ್ಸರ್ ಔಷಧಿಗಳ ದುಪ್ಪಟ್ಟು ದರದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಇದಾದ ನಂತರ ರಾಷ್ಟ್ರೀಯ ಬೆಲೆ ಪ್ರಾಧಿಕಾರ ದರ ಇಳಿಕೆ ಮಾಡಿ ಇಂದಿನಿಂದ ಜಾರಿ ಬರುವಂತೆ ಆದೇಶ ಮಾಡಿದೆ. ಇದನ್ನೂ ಓದಿ: ಹಾಲಿನ ದರ ಏರಿಕೆ ಬೆನ್ನಲ್ಲೇ ಪಶು ಆಹಾರ ದರವೂ ಏರಿಕೆ – ಕೊಟ್ಟು ಕಿತ್ತುಕೊಂಡ ಸರ್ಕಾರ.. ಅಂತಾ ರೈತರ ಆಕ್ರೋಶ..! ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆಯಿಂದ ರೋಗಿಗಳಿಗೆ ವಾರ್ಷಿಕವಾಗಿ 2 ಸಾವಿರಕ್ಕೂ ಹೆಚ್ಚು ಕೋಟಿ ಉಳಿತಾಯ ಆಗಲಿದೆ. ಇಮ್ಯುನೊಥೆರಪಿ ಔಷಧಿಗಳು, ಡೆನೋಸುಮ್ಯಾಬ್, ಪೆಗ್ಫಿಲ್ಗ್ರಾಸ್ಟಿಮ್, ಮತ್ತು ಬೆವಾಸಿಝುಮಾಬ್ ಸೇರಿದಂತೆ ಪ್ರಮುಖ ಔಷಧಿಗಳ ಬೆಲೆಗಳು ಕಡಿಮೆಯಾಗಿವೆ. ಆಸ್ಪತ್ರೆಗಳು, ರಿಟೇಲರ್, ಹೋಲ್ಸೇಲ್ ಮಾರಾಟಗಾರರು, ಚಿಲ್ಲರೆ ಸಗಟು ವ್ಯಾಪಾರಿಗಳು ನಿಗದಿ ಆಗಿರುವ ಬೆಲೆಗೆ ಔಷಧಿಗಳನ್ನ ಮಾರಾಟ ಮಾಡಬೇಕು ಒಂದು ವೇಳೆ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿದ್ರೆ ಕಾನೂನು ರೀತಿಯಲ್ಲಿ ಕ್ರಮ ಆಗಲಿದೆ. ಇದನ್ನೂ ಓದಿ: ಮೈಸೂರು | ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ vs ಬಿಜೆಪಿ – ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಆರೋಪ ಕೇಂದ್ರದಿಂದ ಗ್ರಾಹಕರಿಗೆ ದರ ಇಳಿಕೆಯ ಪರಿಶೀಲನೆಯನ್ನ ಆ್ಯಪ್ ಮೂಲಕ ಗ್ರಾಹಕರು ಔಷಧದ ನೈಜ್ಯ ದರಪಟ್ಟಿಯನ್ನು ಪರಿಶೀಲಿಸಲು ಅವಕಾಶ ಇದೆ. ಫಾರ್ಮಾ ಸಹಿ ದಾಮ್, NPPA ವೆಬ್ಸೈಟ್ನಲ್ಲಿ ಇಳಿಕೆಯಾದ ಔಷಧಗಳ ಬೆಲೆ ಪರಿಶೀಲನೆಗೆ ಅವಕಾಶ ಇದೆ. ಇಂದಿನಿಂದ ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಿಗಳು ಸಿಗಲಿವೆ. ಇದನ್ನೂ ಓದಿ: ಚೀನಾದ ಸ್ಪೈ ಮಹಿಳೆ ಜೊತೆ ವಿವಾಹೇತರ ಸಂಬಂಧ – ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ವಿರುದ್ಧ ತನಿಖೆಗೆ ಆದೇಶ
