BBK13: ಮಹಾಕವಿ ಮಂಜನನ್ನು ನೋಡುತ್ತಿದ್ದಂತೆ ದಂಗಾದ ಯಶಸ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13ರ ಆಟ ಮತ್ತೆ ರಂಗೇರಿದೆ. ಇತ್ತೀಚೆಗಷ್ಟೇ ಮನೆಯಿಂದ ಎಲಿಮಿನೇಟ್ ಆಗಿದ್ದ ಮಾಡರ್ನ್ ಮಹಾಕವಿ ಮಂಜ, ಇದೀಗ ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಮರುಪ್ರವೇಶ ಪಡೆದಿದ್ದಾರೆ.ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಿದ್ದಂತೆ ಮಂಜ ಮನೆಯಲ್ಲಿ ಕಸದ ರಾಶಿಯನ್ನೇ ಹರಡಿದ್ದಾರೆ. ಹಠಾತ್ ಪ್ರತ್ಯಕ್ಷವಾದ ಈ ಕಸದ ರಾಶಿಯನ್ನು ನೋಡಿ ಸ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13ರ ಆಟ ಮತ್ತೆ ರಂಗೇರಿದೆ. ಇತ್ತೀಚೆಗಷ್ಟೇ ಮನೆಯಿಂದ ಎಲಿಮಿನೇಟ್ ಆಗಿದ್ದ ಮಾಡರ್ನ್ ಮಹಾಕವಿ ಮಂಜ, ಇದೀಗ ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಮರುಪ್ರವೇಶ ಪಡೆದಿದ್ದಾರೆ.ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಿದ್ದಂತೆ ಮಂಜ ಮನೆಯಲ್ಲಿ ಕಸದ ರಾಶಿಯನ್ನೇ ಹರಡಿದ್ದಾರೆ. ಹಠಾತ್ ಪ್ರತ್ಯಕ್ಷವಾದ ಈ ಕಸದ ರಾಶಿಯನ್ನು ನೋಡಿ ಸ್ಪರ್ಧಿಗಳು ದಂಗಾಗಿದ್ದರೂ, ಇದು ಮಂಜ ಅವರೇ ಮಾಡಿದ್ದು ಎಂಬ ಸುಳಿವು ಯಾರೊಬ್ಬರಿಗೂ ಸಿಕ್ಕಿಲ್ಲ.ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಮತ್ತೊಂದು ಪ್ರೋಮೊದಲ್ಲಿ, ಸ್ಪರ್ಧಿಗಳಿಗೆ ಮಂಜ ಅವರ ದರ್ಶನವಾಗಿದೆ. ಹೊರಜಗತ್ತಿನ ವಿದ್ಯಮಾನಗಳು ಹಾಗೂ ಪ್ರಸ್ತುತ ಟ್ರೆಂಡಿಂಗ್ ವಿಷಯಗಳ ಕುರಿತು ಸ್ಪರ್ಧಿಗಳಿಗೆ ಮಾಹಿತಿ ನೀಡಲು ಮಂಜ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. View this post on Instagram ಚಟುವಟಿಕೆ ಕೊಠಡಿಗೆ ತೆರಳಿದ ಸ್ಪರ್ಧಿಗಳು ಮಂಜ ಅವರನ್ನು ಕಂಡು ಅಚ್ಚರಿಯಾಗಿದ್ದಾರೆ. ಈ ವೇಳೆ ಸ್ಪರ್ಧಿ ಸೌಂದರ್ಯಾಗೆ ‘ನಿಮ್ಮ ಆಟವನ್ನೆಲ್ಲ ನೋಡಿದ್ದೇನೆ, ಅತ್ಯುತ್ತಮವಾಗಿ ಆಡುತ್ತಿದ್ದೀರ. ಪ್ರತಿಯೊಂದು ಮನೆಯ ಮೂಲೆ ಮೂಲೆಯಲ್ಲೂ ನಿಮ್ಮದೇ ಚರ್ಚೆ ನಡೆಯುತ್ತಿದೆ’ ಎಂದು ಮಂಜ ತಿಳಿಸಿದ್ದಾರೆ.ಬಳಿಕ ಕೊಠಡಿಗೆ ಆಗಮಿಸಿದ ಯಶಸ್, ಮಂಜ ಅವರನ್ನು ಕಂಡು ಗಾಬರಿಗೊಂಡಿದ್ದಾರೆ. ಈ ಹಿಂದೆ ಮಂಜ ಎಲಿಮಿನೇಟ್ ಆಗಿ ಹೊರನಡೆದಾಗ ಯಶಸ್ ಪಾಯಸ ತಿಂದು ಸಂಭ್ರಮಿಸಿದ್ದರು. ಇದೀಗ ಮಂಜ ಅವರ ಮರುಪ್ರವೇಶದಿಂದ ಯಶಸ್ ಮೌನಕ್ಕೆ ಶರಣಾಗಿರುವುದು ಪ್ರೋಮೊದಲ್ಲಿ ಕಂಡುಬಂದಿದೆ. View this post on Instagram
