ರಾಜ್ಯದಲ್ಲಿ SIR ಬಳಿಕ ಮುಸ್ಲಿಂ ಮತದಾರರ ಸಂಖ್ಯೆ ಇಳಿಕೆ
ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಮತದಾರರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ರಾಜ್ಯದಲ್ಲಿ ಶೇಕಡಾ 18.84ರಷ್ಟು ಮುಸ್ಲಿಂ ಮತದಾರರ ಸಂಖ್ಯೆ ಇಳಿಕೆಯಾಗಿದೆ. ಎಸ್ಐಆರ್ಗೂ ಮುನ್ನ 71.56 ಲಕ್ಷ ಇದ್ದ ಮುಸ್ಲಿಂ ಮತದಾರರು, ಎಸ್ಐಆರ್ ಬಳಿಕ 58.08 ಲಕ್ಷಕ್ಕೆ ಇಳಿಕ

ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಮತದಾರರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ರಾಜ್ಯದಲ್ಲಿ ಶೇಕಡಾ 18.84ರಷ್ಟು ಮುಸ್ಲಿಂ ಮತದಾರರ ಸಂಖ್ಯೆ ಇಳಿಕೆಯಾಗಿದೆ. ಎಸ್ಐಆರ್ಗೂ ಮುನ್ನ 71.56 ಲಕ್ಷ ಇದ್ದ ಮುಸ್ಲಿಂ ಮತದಾರರು, ಎಸ್ಐಆರ್ ಬಳಿಕ 58.08 ಲಕ್ಷಕ್ಕೆ ಇಳಿಕೆಯಾಗಿದ್ದಾರೆ. ಈ ಮೂಲಕ ಎಸ್ಐಆರ್ ಬಳಿಕ 13.48 ಲಕ್ಷ ಮುಸ್ಲಿಂ ಮತದಾರರು ಕಡಿಮೆಯಾಗಿದ್ದಾರೆ. ಅಲ್ಲದೇ, 86 ಲಕ್ಷ ಮುಸ್ಲಿಮೇತರ ಮತದಾರರ ಸಂಖ್ಯೆ ಇಳಿಕೆ ಆಗಿದೆ. ಇನ್ನು, ಬೆಂಗಳೂರಿನಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಶೇ.33.72ರಷ್ಟು ಕಡಿಮೆ ಆಗಿದೆ. ಎಸ್ಐಆರ್ಗೂ ಮುನ್ನ 13.67 ಲಕ್ಷ ಇದ್ದ ಮತದಾರರು, ಇದೀಗ 9.06 ಲಕ್ಷಕ್ಕೆ ಇಳಿಕೆ ಕಂಡಿದ್ದಾರೆ. ಅಂದಹಾಗೆ, ಕಾಂಗ್ರೆಸ್ನ 10 ಶಾಸಕರ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಭಾರಿ ಇಳಿಕೆಯಾಗಿದೆ.
Read the complete story at Public TV Kannada