ರಾಷ್ಟ್ರ ವಿರೋಧಿ ಯಾರು?: ಚರ್ಚೆಗೆ ರಾಹುಲ್ ಸವಾಲು
ನವದೆಹಲಿ (ಪಿಟಿಐ): ‘ನಕ್ಸಲ್ ಮನಃಸ್ಥಿತಿ’ ಕುರಿತ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ರಾಷ್ಟ್ರ ವಿರೋಧಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬ ಚರ್ಚೆಗೆ ಬನ್ನಿ’ ಎಂದು ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬ

ನವದೆಹಲಿ (ಪಿಟಿಐ): ‘ನಕ್ಸಲ್ ಮನಃಸ್ಥಿತಿ’ ಕುರಿತ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ರಾಷ್ಟ್ರ ವಿರೋಧಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬ ಚರ್ಚೆಗೆ ಬನ್ನಿ’ ಎಂದು ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿ ಉದ್ದೇಶಿಸಿ ಬಸ್ತಾರ್ನಲ್ಲಿ ಭಾನುವಾರ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ‘ನಕ್ಸಲ್ ಮನಃಸ್ಥಿತಿ’ ಕುರಿತು ಪ್ರಸ್ತಾಪಿಸಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕ, ‘ಯೋಧರು ಪ್ರಧಾನಿಯ ಸುಳ್ಳುಗಳನ್ನು ಖರೀದಿಸಲಿಲ್ಲ ಎಂಬುದು ಅವರ ಮುಖ ನೋಡುವಾಗಲೇ ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.‘ಪ್ರಧಾನಿ ನಮ್ಮನ್ನು ನಕ್ಸಲರು ಎಂದು ಕರೆಯುತ್ತಾರೆ. ಚರ್ಚೆಗೆ ಬಂದರೆ, ಬಳಿಕ ಒಬ್ಬ ಸೈನಿಕನನ್ನು ಎದುರಿಸುವುದಕ್ಕೂ ಪ್ರಧಾನಿಗೆ ಧೈರ್ಯ ಇರಲಾರದು’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.‘ಪ್ರಧಾನಿ ತಲ್ಲಣಗೊಂಡಿದ್ದಾರೆ, ಗೊಂದಲಕ್ಕೊಳಗಾಗಿದ್ದಾರೆ ಮತ್ತು ಹತಾಶರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಅವರು ಗಂಟುಮೂಟೆ ಕಟ್ಟುವ ಸಮಯ ವೇಗವಾಗಿ ಹತ್ತಿರವಾಗುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
