ಬಿಜೆಪಿ ನಾಯಕರ ಮನೆಗೆ ಮಮ್ಮುಟ್ಟಿ: ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ
ತ್ರಿಶ್ಶೂರ್: ಮಲಯಾಳಂ ನಟ ಮಮ್ಮುಟ್ಟಿ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಗೋಪಾಲಕೃಷ್ಣನ್ ಮನೆಗೆ ಭೇಟಿ ನೀಡಿರುವ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಟೀಕಿಸಿದ್ದಾರೆ.ಗೋಪಾಲಕೃಷ್ಣನ್ ಅವರ ಮಗಳ ಮದುವೆ ಇತ್ತೀಚೆಗೆ ನಡೆದಿತ್ತು. ವಿವಾಹ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದಿದ್ದ ಕಾರಣ, ಮಮ್ಮುಟ್ಟಿ ಅ

ತ್ರಿಶ್ಶೂರ್: ಮಲಯಾಳಂ ನಟ ಮಮ್ಮುಟ್ಟಿ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಗೋಪಾಲಕೃಷ್ಣನ್ ಮನೆಗೆ ಭೇಟಿ ನೀಡಿರುವ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಟೀಕಿಸಿದ್ದಾರೆ.ಗೋಪಾಲಕೃಷ್ಣನ್ ಅವರ ಮಗಳ ಮದುವೆ ಇತ್ತೀಚೆಗೆ ನಡೆದಿತ್ತು. ವಿವಾಹ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದಿದ್ದ ಕಾರಣ, ಮಮ್ಮುಟ್ಟಿ ಅವರು ಬಿಜೆಪಿ ನಾಯಕನ ಮನೆಗೆ ಭಾನುವಾರ ಭೇಟಿ ನೀಡಿದ್ದರು.ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಕೇಳಿಬಂದಿದ್ದು, ಗೋಪಾಲಕೃಷ್ಣನ್ ಅವರೂ ತಿರುಗೇಟು ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕೆಲವು ಶಕ್ತಿಗಳು ಕೇರಳಂನಲ್ಲಿ ಸಾಮರಸ್ಯ ನೆಲೆಗೊಳ್ಳುವುದನ್ನು ಇಷ್ಟಪಡುವುದಿಲ್ಲ. ಸ್ನೇಹವು ರಾಜಕೀಯ, ಧರ್ಮ, ಜಾತಿ, ಭಾಷೆ, ವಸ್ತ್ರ ಹಾಗೂ ಬಣ್ಣವನ್ನು ಮೀರಿದ್ದಾಗಿದೆ ಎಂದು ಹೇಳಿದ್ದಾರೆ.‘ಕೇರಳಂನಲ್ಲಿ ಸ್ನೇಹದ ಬಂಧವು ಸದಾ ಇರಲಿದೆ. ಇತ್ತೀಚೆಗೆ ಕೆಲವರು ಅದನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕುಟುಕಿದ್ದಾರೆ.ವಿವಿಧ ಪಕ್ಷಗಳ ನಾಯಕರ ನಡುವೆ ವೈಯಕ್ತಿಕ ಸ್ನೇಹ ಸಂಬಂಧವಿದೆ. ಕೌಟುಂಬಿಕ ಕಾರ್ಯಕ್ರಮಗಳಿಗೆ ಪರಸ್ಪರ ಸಹಕಾರ ನೀಡುತ್ತಾರೆ ಎಂದಿರುವ ಗೋಪಾಲಕೃಷ್ಣನ್, ಸಿಪಿಐ(ಎಂ) ನಾಯಕ, ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಎಡ ಪಕ್ಷಗಳು ಹಾಗೂ ಇತರ ಪಕ್ಷಗಳ ಹಲವು ನಾಯಕರೂ ಮದುವೆಗೆ ಬಂದಿದ್ದರು ಎಂದಿದ್ದಾರೆ.ಟೀಕೆ ಮಾಡುತ್ತಿರುವರು ಪಕ್ಷಕ್ಕೆ ಸೇರಿದವರಲ್ಲ ಎಂದು ಸಿಪಿಐ(ಎಂ) ನಾಯಕ ಥಾಮಸ್ ಐಸಾಕ್ ಹೇಳಿದ್ದಾರೆ.
